ಬಾಗಲಕೋಟೆ:ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿವ ಕಾರಣಕ್ಕೆ ಸರ್ಕಾರದಿಂದ ಅ.೨೩ ರಂದು ಆಚರಿಸುವ ವೀರಮಾತೆ ಕಿತ್ತೂರ ರಾಣಿ ಚನ್ನಮ್ಮ ಜಯಂತಿ ಬಹಿಷ್ಕರ ಮಾಡುವದಿಲ್ಲ. ಬದಲಾಗಿ ಸಮಾಜ ಬಾಂಧವರು ಕಪ್ಪು ಪಟ್ಟಿ ಪ್ರದರ್ಶನ ಮೂಲಕ ತಮ್ಮ ಹಕ್ಕೋತ್ತಾಯ ಮಂಡಿಸಲಿದ್ದಾರೆ ಎಂದು ಅಖಿಲ ಭಾರತ ಪಂಚಮಸಾಲಿ ಲಿಂಗಾಯತ ಮಹಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.
ರಾಜ್ಯಾದ್ಯಂತ ಸರ್ಕಾರವು ಕಿತ್ತೂರ ರಾಣಿ ಜಯಂತಿ ಆಚರಿಸುತ್ತಿದೆ. ಈ ವೇಳೆ ಭಾಗವಹಿಸುವ ಸಮಾಜದ ಬಾಂಧವರು ಕಪ್ಪು ಪಟ್ಟಿ ಪ್ರದರ್ಶನ ಮಾಡಬೇಕು. ಇದಕ್ಕೂ ಮುನ್ನ ಅ.೨೧ ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಪಂಚಮಸಾಲಿ ಸಮಾಜದ ರ‍್ಯಾಲಿ ನಡೆಯಲಿದೆ. ಸಮಾಜದ ನಾಯಕರಾದ ಶಾಸಕ ಬಸವನಗೌಡ ಪಾಟೀಲ(ಯತ್ನಾಳ), ಶಾಸಕ ಅರವಿಂದ ಬೆಲ್ಲದ, ಶಾಸಕ ಸಿದ್ದು ಸವದಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸಮಾಜದ ಬಾಂಧವರು ಭಾಗವಹಿಸಲಿದ್ದಾರೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಯಪ್ರಕಾಶ ಹೆಗಡೆ ನೇತೃತ್ವ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ವಿವಿಧ ಭಾಗದಲ್ಲಿ ಸಂಚರಿಸಿ ಅಧ್ಯಯನ ನಡೆಸಿ ಆದರು ೧೨ ಜಿಲ್ಲೆಗೆ ಪ್ರವಾಸ ಬಾಕಿ ಉಳಿಸಿದೆ. ಇಂದರಿಂದ ಮೀಸಲಾತಿ ವಿಷಯ ವಿಳಂಬವಾಗುತ್ತಿದೆ. ಕೂಡಲೇ ಸರ್ಕಾರ ಇದನ್ನು ಚುರುಕು ಮುಟ್ಟಿಸಬೇಕು. ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ. ಯಾವುದೇ ಸಮಾಜದ ವಿರೋಽಯಲ್ಲ. ಸುಖಾಸುಮ್ಮನೆ ನಮ್ಮ ಹೋರಾಟದ ಬಗ್ಗೆ ವಿರೋಽ ಹೇಳಿಕೆ ನೀಡಿದರೇ ಸಮಾಜದ ಬಾಂಧವರು ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಬೇಕು ಎಂದು ಮನವಿ ಮಾಡಿದರು.
ಯತ್ನಾಳ ಬೆನ್ನಿಗೆ ಸಮಾಜ ನಿಲ್ಲಲಿದೆ..
ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಬಸನಗೌಡ ಪಾಟೀಲ ಯತ್ನಾಳ ರಾಷ್ಟ್ರಮಟ್ಟದ ನಾಯಕರು. ಕೇಂದ್ರದಲ್ಲಿ ಮಾಜಿ ಸಚಿವರು. ಸಮಾಜಕ್ಕೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಿದ್ದಾರೆ. ಅದನ್ನೆ ನೆಪವಾಗಿಸಿ ಅರುಣಸಿಂಗ್ ನೀಡಿರುವ ಹೇಳಿಕೆ ಸರಿಯಲ್ಲ. ಯತ್ನಾಳ ಅವರಿಗೆ ಅನ್ಯಾಯ ಮಾಡಲು ಮುಂದಾದರೇ ಸಮಾಜ ಯತ್ನಾಳ ಅವರ ಬೆನ್ನಿಗೆ ನಿಲ್ಲಲಿದೆ. ಸಂದರ್ಭದಲ್ಲಿ ಬಂದರೇ ರಾಜಕೀಯ ಬಿಡುತ್ತೇವೆ. ಸಮುದಾಯವನ್ನು ಬಿಡುವದಿಲ್ಲ. ಸಂವಿಧಾನ ಬಂಧವಾಗಿ ನಮ್ಮ ಹಕ್ಕು ಕೇಳುತ್ತಿದ್ದೇವೆ ಎಂದು ಖಾರವಾಗಿ ನುಡಿದರು.
ಚುನಾವಣೆಯಲ್ಲಿ ಗೊತ್ತಾಗುತ್ತೆ:
ಸಚಿವ ಗೋವಿಂದ ಕಾರಜೋಳ ಏನು ಗೊತ್ತಿದೆ. ಸುಖಾಸುಮ್ಮನೆ ಹೇಳಿಕೆ ನೀಡುತ್ತಾರೆ. ನೀರಾವರಿ ಎಷ್ಟು ಖರ್ಚು ಮಾಡಿದ್ದಾರೆ. ನಮ್ಮ ಕ್ಷೇತ್ರದ ನಂದವಾಡಗಿ ಏತ ನೀರಾವರಿ ಬಗ್ಗೆ ಚಕಾರ್ ಎತ್ತಲಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಅವರ ಕೊಡುಗೆ ಏನು ಇಲ್ಲ. ಕಾಂಗ್ರೆಸ್ ಜೋಡೋ ಪಾದಯಾತ್ರೆ ಬಗ್ಗೆ ಮಾತನಾಡಲು ಅವರಿಗೆ ಹಕ್ಕಿಲ್ಲ. ಚುನಾವಣೆ ಬಂದಾಗ ಯಾತ್ರೆಯ ಶಕ್ತಿ ಗೊತ್ತಾಗಲಿದೆ. ೨೦೨೪ ಚುನಾವಣೆಯಲ್ಲಿ ರಾಹುಲ್ ಗಾಂಧಿ ಶಕ್ತಿ ಅರಿವು ಗೊತ್ತಾಗಲಿದೆ. ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ರಾಜ್ಯ ಬಿಜೆಪಿಯದು ಹಗರಣಗಳ ಸರ್ಕಾರ ಅಂತ ಆರೋಪಿಸಿದರು.
ಮುಖಂಡರಾದ ಎಸ್.ಎನ್.ರಾಂಪೂರ, ಚನ್ನವೀರ ಅಂಗಡಿ, ಸಂಗಮೇಶ ದೊಡ್ಡಮನಿ, ಮಹಾಂತೇಶ ಹೂಸೂರ, ಮಲ್ಲಿಕಾರ್ಜುನ ಗೌಡರ ಸುದ್ದಿಗೋಷ್ಠಿಯಲ್ಲಿ ಇದ್ದರು.