ಹುಲಸೂರಿನ ಶ್ರೀ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಥೇರ್ ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ ಭಕ್ತರು ಅಗ್ನಿ ಪೂಜೆ ನೆರವೇರಿಸಿ ಅಗ್ಗಿ ತುಳಿದು ಪುನೀತರಾದರು. ಅನೀಲ ಭೂಸಾರೆ, ಓಂಕಾರ ಪಟ್ನೆ, ಕಾಶೀನಾಥ ಪಾರಶೆಟ್ಟೆ ಇತರರಿದ್ದರು. 
ಜಿಲ್ಲೆ

ವೀರಭದ್ರೇಶ್ವರ ಅಗ್ಗಿ ತುಳಿದು ಪುನೀತರಾದ ಭಕ್ತರು

ಹುಲಸೂರು: ಶ್ರೀ ವೀರಭದ್ರೇಶ್ವರ ಜಾತ್ರೋತ್ಸವ ನಿಮಿತ್ತ ಪಟ್ಟಣದಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನ ಜಾವದವರೆಗೆ ವೀರಭದ್ರೇಶ್ವರ ದೇವರ ಮೂರ್ತಿ ಮೆರವಣಿಗೆ, ಪಲ್ಲಕ್ಕಿ ಉತ್ಸವ ಬಾಜಾ-ಭಜಂತ್ರಿ, ಡೊಳ್ಳು ಕುಣಿತ, ಹಲಗಿ ವಾದನ, ಯುವಕರ ಕುಣಿತದೊಂದಿಗೆ ಸಂಭ್ರಮದಿಂದ ಜರುಗಿತು.

ಗುರುವಾರ ಸಂಜೆ ಶುರುವಾದ ಪಲ್ಲಕ್ಕಿ ಮೆರವಣಿಗೆ ಶುಕ್ರವಾರ ಬೆಳಗ್ಗೆ ೬ಕ್ಕೆ ಅಗ್ನಿಕುಂಡ ತಲುಪಿತು. ಮಾರ್ಗದುದ್ದಕ್ಕೂ ವೀರಗಾಸೆ ಕುಣಿತ ಗಮನಸೆಳೆಯಿತು. ಅಗ್ನಿ ಕುಂಡಕ್ಕೆ ದೇವರ ಪಲ್ಲಕ್ಕಿ ಜತೆ ಬಂದ ಭಕ್ತರು ಐದು ಪ್ರದಕ್ಷಿಣೆ ಹಾಕಿ ಅಗ್ಗಿ ತುಳಿದು ಪುನೀತರಾದರು.

ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಕಾಶೀನಾಥ ಪಾರಶೆಟ್ಟೆ, ಪ್ರಮುಖರಾದ ಓಂಕಾರ ಪಟ್ನೆ, ಅನೀಲ ಭೂಸಾರೆ, ಓಂಕಾರ ಪಟ್ನೆ, ಲತಾ ಹಾರಕೂಡೆ, ಚಂದ್ರಕಾಂತ ದೇಟ್ನೆ, ಬಂಡುರಾವ ಪಾಟೀಲ, ಜಗನ್ನಾಥ ದೇಟ್ನೆ, ಶ್ರೀಮಂತ ಜಾನಬಾ, ಬಾಬುರಾವ ಬಾಲಕುಂದೆ, ಸಿದ್ದಲಿಂಗ ಸ್ವಾಮಿ ಇತರರಿದ್ದರು. ಪಿಎಸ್‌ಐ ಶಿವಪ್ಪ ಮೇಟಿ ನೇತೃತ್ವದಲ್ಲಿ ಬಂದೋಬಸ್ತ್​ ಮಾಡಲಾಗಿತ್ತು.