ಚಿಕ್ಕೋಡಿಯಲ್ಲಿ ವೀರಜ್ಯೋತಿ ಯಾತ್ರೆಯನ್ನು ಬರಮಾಡಿ ಕೊಳ್ಳಲಾಯಿತು. ಸಂಪಾದನಾ ಮಹಾಸ್ವಾಮೀಜಿ, ಪ್ರವೀಣ ಕಾಂಬಳೆ, ಸಂಜಯ ಕವಟಗಿಮಠ, ಎಸ್.ವೈ.ಹಂಜಿ ಇತರರಿದ್ದರು. 
ಜಿಲ್ಲೆ

ವೀರಜ್ಯೋತಿಗೆ ಅದ್ದೂರಿ ಸ್ವಾಗತ

Belagavi

ಕಾಗವಾಡ, ಬೆಳಗಾವಿ: ಚಿಕ್ಕೋಡಿ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸಿದ ಕಿತ್ತೂರು ಚನ್ನಮ್ಮ ವೀರಜ್ಯೋತಿಯನ್ನು ಮಂಗಳವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಇಲ್ಲಿನ ಚನ್ನಮ್ಮ ಸರ್ಕಲ್‌ನಲ್ಲಿ ತಹಸೀಲ್ದಾರ್ ರಾಜೇಶ ಬುರ್ಲಿ ಜ್ಯೋತಿ ಹೊತ್ತ ವಾಹನಕ್ಕೆ ಪೂಜೆ ನೆರವೇರಿಸಿ, ಬರಮಾಡಿಕೊಂಡರು. ವಾದ್ಯವೈಭವದೊಂದಿಗೆ ವೀರ ಜ್ಯೋತಿಯ ಭವ್ಯ ಮೆರವಣಿಗೆ ಪಟ್ಟಣದಲ್ಲಿ ಜರುಗಿತು. ಕುಂಭ ಹೊತ್ತ ಸುಮಂಗಲೆಯರು, ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವೀರ ರಾಣಿ ಚನ್ನಮ್ಮಾಜಿಗೆ ಜೈ ಘೋಷ ಹಾಕುತ್ತ ಮೆರವಣಿಗೆ ನಡೆಯಿತು. ಚನ್ನಮ್ಮ ಸರ್ಕಲ್‌ನಿಂದ ಪ್ರಾರಂಭವಾದ ಭವ್ಯ ಮೆರವಣಿಗೆ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದವರೆಗೆ ಸಾಗಿ, ಅಥಣಿಯತ್ತ ಸಾಗಿತು. ಹನುಮಂತ ನೇರಳೆ, ಎಂ.ಆರ್.ಮುಂಜೆ, ಸಂಜಯಕುಮಾರ ಸದಲಗಿ, ಶೇಖರ ಕರಿಬಸಪ್ಪಗೋಳ, ವಿ.ಎಸ್.ತುಗಶೆಟ್ಟಿ, ಕೆ.ಟಿ.ಕಾಂಬಳೆ, ಎಂ.ಆರ್. ಪಾಟೀಲ, ರವೀಂದ್ರ ಸನಗೌಡರ, ಸಿದ್ದು ಒಡೆಯರ್, ಶಿವಾನಂದ ನವಿನ್ಯಾಳೆ, ಪ್ರವೀಣ ಪಾಟೀಲ, ಪ್ರಕಾಶ ಚೌಗುಲಾ, ರಮೇಶ ಚೌಗುಲಾ ಇತರರಿದ್ದರು.