ಜಿಲ್ಲೆ

ವೀರ ಶರಣ ಮಡಿವಾಳ ಮಾಚಿದೇವ

ಬಾಗಲಕೋಟೆ: ೧೨ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಬಿಜ್ಜಳ ರಾಜನನ್ನೇ ಎದುರಿಸಿ ವೀರಶರಣ ಎನಿಸಿಕೊಂಡವರು ಮಡಿವಾಳ ಮಾಚಿದೇವ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಡಿವಾಳ ಮಾಚಿದೇವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಅವರು ಅಂದಿನ ಶರಣರು ವೃತ್ತಿಗೆ ಸ್ವಾಭಿಮಾನಕ್ಕೆ ದಕ್ಕೆ ಬಂದರೆ, ಯಾವ ಮಹಾರಾಜನಿಗೂ ಹೆದರುತ್ತಿರಲಿಲ್ಲ ಎಂಬುದಕ್ಕೆ ಮಡಿವಾಳ ಮಾಚಿದೇವ ನಿದರ್ಶನವಾಗಿದ್ದಾರೆ ಎಂದರು.

ಭಾರತ ದೇಶ ಅನೇಕ ಧರ್ಮ ಆಚರಣೆಗಳಲ್ಲಿ ವಿಶಿಷ್ಟ ಕೊಡುಗೆ ನೀಡಿ ಆಯಾ ಭಾಗದಲ್ಲಿ ಪ್ರಾಂತಗಳಲ್ಲಿ ಅಲ್ಲಿಯ ನೆಲ ಜಲವನ್ನು ಅನೇಕ ಸಂತರು, ಶರಣರು ಪಾವನ ಮಾಡಿದ್ದರಿಂದ ಇಂದು ದೇಶ ಜಾಗತಿಕ ಮನ್ನಣೆ ಪಡೆದಿದೆ ಎಂದರು. ಮಹಾರಾಷ್ಟçದಲ್ಲಿ ಸಂತರಾಗಿ ಹೋದರೆ, ಕರ್ನಾಟಕದಲ್ಲಿ ಶರಣರಾಗಿ ಹೋಗಿದ್ದಾರೆ. ಈ ಎಲ್ಲ ಸಂತರು ಶರಣರು ತಮ್ಮ ಅನುಭವದ ನುಡಿಗಳನ್ನೇ ವಚನಗಳನ್ನಾಗಿ ಮಾಡಿಕೊಂಡು ಮೇಲು, ಕೀಳು, ಜ್ಞಾನಿ, ಅಜ್ಞಾನಿ ಎಂಬ ಬೇಧಬಾವ ಮಾಡದೇ ಮಾನವ ಕುಲ ಒಂದೇ ಎಂದು ಸಾರಿ ಸಮಾನತೆಯ ಹಾಗೂ ಸ್ವಾಭಿಮಾನದ ಬದುಕು ಕಳೆದವರಾಗಿದ್ದಾರೆ ಎಂದರು.

ಶರಣರು ಕಾಯಕ ನಿಷ್ಠೆ ಉಳ್ಳವರಗಿದ್ದು, ಮಡಿವಾಳ ಮಾಚಿದೇವ ಶರಣರ ಕೊಳೆ ಬಟ್ಟೆಯನ್ನು ಶುಚಿಗೊಳಿಸುವದಲ್ಲದೇ ಲೋಕದ ಜನರ ಹೃದಯವನ್ನು ಶುಚಿಗೊಳಿಸುವ ಕಾರ್ಯ ಮಾಡಿದ್ದಾರೆ. ಕಾಯಕದಲ್ಲಿ ಸಿರಿವಂತಿಕೆಯನ್ನು ಕಂಡವರು. ಆದರೆ ವೈಭವದ ಜೀವನದಕ್ಕೆ ಮಾರು ಹೋಗದೇ ಸರಳ ಜೀವನ ಸಾಗಿಸಿ ಮಾದರಿಯಾದವರು. ಮಡಿವಾಳ ಮಾಚಿದೇವರು ಹಾಕಿದ ಈ ದಾರಿಯಲ್ಲಿ ನಾಲ್ಕು ಹೆಜ್ಜೆಗಳನ್ನಾದರೂ ಹಾಕಿದಾಗ ಅವರ ಜಯಂತಿ ಆಚರಿಸಿದ್ದು ಸಾರ್ಥಕವಾಗುತ್ತದೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಡಾ.ಬಸವರಾಜ ಕುಂಬಾರ ಮಾತನಾಡಿ ೧೨ನೇ ಶತಮಾನದಲ್ಲಿ ಆದ ಶರಣರ ಬಗ್ಗೆ ೧೪ನೇ ಶತನಾಮದಲ್ಲಿ ಆಗಿಹೋದ ಕವಿ ಚಾಮರಸ ತನ್ನ ಪ್ರಭುಲಿಂಗ ಲೀಲೆ ಎಂಬ ಗ್ರಮಥದಲ್ಲಿ ಎಲ್ಲ ಶರಣರ ಮಹತ್ವವನ್ನು ತಿಳಿಸಿಕೊಟ್ಟಿದ್ದಾನೆ. ಅದರಲ್ಲಿ ಅಗ್ರನಾದವರು ಮಡಿವಾಳ ಮಾಚಿದೇವ ಎಂದರು. ಬಸವಣ್ಣನವರೇ ತಮ್ಮ ವಚನದಲ್ಲಿ ಎನ್ನ ಕಾಯವ ಶುದ್ದಿ ಮಾಡಿದವ ಮಡಿವಾಳ ಎಂದು ವರ್ಣಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಚ್.ವಾಯ್.ಮೇಟಿ ಅವರು ವ್ಲತ್ತಿಯಲ್ಲಿ ಮಡಿವಾಳನಾದರೂ ಭಕ್ತಿಯಲ್ಲಿ ಬಸವಣ್ಣನಗಿಂತಲು ಅಗ್ರಸ್ಥಾನ ಪಡೆದವರು ಮಡಿವಾಳ ಮಾಚಿದೇವನಾಗಿದ್ದು, ಜಾತಿಯಿಂದ ವ್ಲತ್ತಿಯಲ್ಲ. ವೃತ್ತಿಯಿಂದ ಜಾತಿ ಎಂದು ಅರಿತು ಜಾತಿ, ಮತ, ಪಚಿಥ ಸಂಕೋಲೆಯಿಂದ ಹೊರಬಂದು ಮನುಷ್ಯಕುಲ ಒಂದೇ ಎಂದು ಸಾರಿದವ ಮಾಚಿದೇವ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ, ಸಮುದಾಯದ ಮುಖಂಡರಾದ ಮುತ್ತು ಮಡಿವಾಳರ, ಅಮರೇಶ ಕೊಳ್ಳಿ, ವಿ.ಬಿ.ಮಡಿವಾಳರ, ಶಂಕರ ಮಡಿವಾಳರ, ಸುಮ್ಮಕ್ಕ ಮಡಿವಾಳರ, ಕೃಷ್ಣಪ್ಪ ಮಡಿವಾಳರ ಸೇರಿದಂತೆ ಇತರರು ಉಪಸ್ಥಿತರಿದ್ದರು.