ಚಿತ್ರದುರ್ಗ: ನಾಡಿನ ಖ್ಯಾತ ನಟ ದಿ. ಡಾ.ವಿಷ್ಣುವರ್ಧನ್ ಅವರ 73ನೇ ಜಯಂತಿ ಅಂಗವಾಗಿ ತಿಪ್ಪಜ್ಜಿ ಸರ್ಕಲ್‌ನಲ್ಲಿ ಅವರ ಭಾವಚಿತ್ರಕ್ಕೆ ಹೂವಿನ ಹಾರವನ್ನಾಕಿ ಆಚರಿಸಲಾಯಿತು.
ತಿಪ್ಪಜ್ಜಿ ಸರ್ಕಲ್ ಬಳಗದ ಯುವಕರು, ಅಭಿಮಾನಿಗಳು ಕೇಕ್ ಕತ್ತರಿಸಿ, ಸಿಹಿ ವಿತರಿಸುವ ಮೂಲಕ ಆಚರಿಸಿ, ವಿಷ್ಣುವರ್ಧನ್ ಅವರನ್ನು ಸ್ಮರಿಸಿದರು.