ಜಿಲ್ಲೆ

ವಿಷ್ಣು ಸಮುದ್ರ ಕೆರೆಗೆ ಗಣೇಶ ವಿಸರ್ಜನೆ

ಬೇಲೂರು : ಪಟ್ಟಣದ ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಗಣೇಶ ಚತುರ್ಥಿಯಂದು ವಿನಾಯಕ ಯುವಕರ ಬಳಗದಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಮಂಗಳವಾರ ಪಟ್ಟಣದ ವಿವಿಧ ಬೀದಿಗಳಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಿ ಭಕ್ತರ ಸಮ್ಮುಖದಲ್ಲಿ ವಿಷ್ಣು ಸಮುದ್ರ ಕೆರೆಯಲ್ಲಿ ವಿಸರ್ಜಿಸಲಾಯಿತು.

ಪುರಸಭಾ ಸದಸ್ಯ ಬಿ.ಎ.ಜಮಾಲೂದ್ದಿನ್, ನೇತೃತ್ವದಲ್ಲಿ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಕರೊನಾ ಹಾವಳಿಯಿಂದ ಕಳೆದ ಮೂರು ವರ್ಷ ಯಾವುದೆ ಹಬ್ಬ ಆಚರಿಸದೆ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಆದರೆ ಈ ಬಾರಿ ಯಾವುದೇ ತಡುಕಿಲ್ಲದೆ ದೇವರ ಪೂಜೆ ನೆಡೆಯುತ್ತಿದ್ದು, ಎಲ್ಲರಿಗೂ ದೇವರು ಒಳಿತು ಮಾಡಲಿ ಎಂದರು.

ಸ್ಥಳೀಯ ನಿವಾಸಿ ಶಿವರಾಜ್ ಮಾತನಾಡಿ, ಕಳೆದ 12 ವರ್ಷಗಳಿಂದ ಭಕ್ತಿ ನಿಷ್ಠೆಯಿಂದ ಗಣಪತಿಯನ್ನು ಪ್ರತಿಷ್ಠಾಪಿಸಿ ವಿನಾಯಕ ಗೆಳೆಯರ ಬಳಗ ಪೂಜಿಸುತಿದ್ದು, ಯಾವುದೇ ಜಾತಿ, ಧರ್ಮದ ಬೇದವಿಲ್ಲದೆ ಎಲ್ಲರೂ ಬಾಗವಹಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ರಂಗನಾಥ್, ರ್ಷ, ದಿಲೀಪ್, ಗೋಪಿ, ಗಿರೀಶ್ ಇತರರಿದ್ದರು.