ಭಾಲ್ಕಿಯ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ಸೋಮವಾರ ಎಂಜನಿಯರ್ ಡೇ ನಿಮಿತ್ತ ಸರ್ ಎಂ. ವಿಶ್ವೇಶ್ವರಯ್ಯನವರ ಪುತ್ಥಳಿಗೆ ಎಇಇ ಅಲ್ತಾಫ್ ಮಿಯಾ ಮಾಲಾರ್ಪಣೆ ಸಲ್ಲಿಸಿದರು. ಸಂಗಮೇಶ ಹುಣಜೆ ಮದಕಟ್ಟಿ, ರಿಯಾಜ್ ಅಹ್ಮದ್ ಇತರರಿದ್ದರು. 
ಜಿಲ್ಲೆ

ವಿಶ್ವೇಶ್ವರಯ್ಯ ಕೊಡುಗೆ ಅನನ್ಯ

ಭಾಲ್ಕಿ: ಭಾರತದ ಆರ್ಥಿಕ ಅಭಿವೃದ್ಧಿಗೆ ಸರ್ ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಅನನ್ಯವಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಲ್ತಾಫ್ ಮಿಯಾ ಹೇಳಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಎಂಜನಿಯರ್ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಶ್ರೇಷ್ಠ ಪುತ್ರರಲ್ಲಿ ಎಂ. ವಿಶ್ವೇಶ್ವರಯ್ಯ ಒಬ್ಬರು. ಇಡೀ ಜೀವರಾಶಿಗಳನ್ನು ಕಾಪಾಡುವ ಜಲಸಂಪನ್ಮೂಲ ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸಿರುವ ಸರ್ ಎಂ.ವಿ. ಆಧುನಿಕ ಭಾರತದ ಪ್ರತಿಭಾನ್ವಿತ ವ್ಯಕ್ತಿ ಹಾಗೂ ದೇಶದಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಇಂತಹ ಮಹಾನ್ ನಾಯಕನ ತತ್ವಾದರ್ಶಗಳನ್ನು ಇಂದಿನ ಯುವ ಎಂಜನಿಯರ್‌ಗಳು ಅನುಸರಿಸಿ, ನೂತನ ಆವಿಷ್ಕಾರ ಹೊಸ ಚಿಂತನೆಗಳೊಂದಿಗೆ ಸದೃಢ ಭಾರತ ಸಾಕಾರಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಪ್ರಥಮ ದರ್ಜೆ ಗುತ್ತಿಗೆದಾರರಾದ ಸಂಗಮೇಶ ಹುಣಜೆ ಮದಕಟ್ಟಿ, ರಾಜಕುಮಾರ ಬಿರಾದಾರ್, ರಿಯಾಜ್ ಅಹ್ಮದ್, ಶಿವಾಜಿ ಚವ್ಹಾಣ್, ಮಹಾದೇವ, ಸಹಾಯಕ ಎಂಜನಿಯರ್‌ಗಳಾದ ಲೋಹಿತ ಉತ್ಕಾರ್, ರಾಮಲಿಂಗ, ಶಿವಪ್ರಸಾದ, ಋದಯ್ಯ ಪಾಟೀಲ್, ಸಿದ್ದೇಶ ಭುಶೆಟ್ಟೆ, ರವೀಂದ್ರ ಯರನಾಳೆ, ತಮ್ಮಣ್ಣ, ಅನ್ವರ, ಅನಿರುದ್ಧ, ವಿಜಯಲಕ್ಷ್ಮಿ, ನಂದಕುಮಾರ ಜಾಧವ್, ನಿಖೀಲ ಡೋಣಗಾಪುರ, ನಂದಕುಮಾರ ಕಾಳೇಕರ್, ಸಯ್ಯದ್, ಶಿವರಾಜ, ರೇಖಾ ಇತರರಿದ್ದರು.