ಸಿಂದಗಿ: ವಿಶ್ವಾಸಾರ್ಹತೆ ಹೆಜ್ಜೆಗಳ ಮೂಲಕ ನಡೆದು ಬಂದ ಸಹಕಾರಿ ಬ್ಯಾಂಕ್‌ಗಳು ಪ್ರಸ್ತುತ ಆರ್ಥಿಕ ಸಮೂಹದ ವಿಸ್ತಾರಕ್ಕೆ ಕಾರಣವಾಗಿವೆ ಎಂದು ವಿಶ್ರಾಂತ ಪ್ರಾಚಾರ್ಯ ಬಿ.ಪಿ. ಕರ್ಜಗಿ ಹೇಳಿದರು.
ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಿ. ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್‌ನ 59ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಹೆಚ್ಚುತ್ತಿರುವ ಆರ್ಥಿಕ ಕ್ಷೇತ್ರದಲ್ಲಿನ ಡಿಜಿಟಲ್ ಕ್ರಾಂತಿಯಿಂದ ಈ ಕ್ಷೇತ್ರದ ಬ್ಯಾಂಕ್‌ಗಳು ಸಹಕಾರಿ ಸಂಘಗಳ ಧ್ಯೇಯ ಮತ್ತು ಸಹಕಾರಿ ಕಾನೂನುಗಳ ಅನುಸರಿಕೆ ಪ್ರಗತಿಗೆ ಪೂರಕವಾಗಿದೆ. ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ಆಧುನಿಕ ವ್ಯವಸ್ಥೆಯ ಜತೆಗೆ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಆಶಿಸಿದರು.
ಬ್ಯಾಂಕಿನ ಅಧ್ಯಕ್ಷ ಬಸವರಾಜ ಶಹಾಪೂರ ವಾರ್ಷಿಕ ವರದಿ ವಾಚಿಸಿ, ಒಂದು ಮುಖ್ಯ ಕಚೇರಿ, ಐದು ಶಾಖೆಗಳುಳ್ಳ ಬ್ಯಾಂಕು 8176 ಜನ ಸದಸ್ಯರನ್ನು ಹೊಂದಿದೆ. ರೂ. 8948.47 ಲಕ್ಷ ಠೇವಣಿ, ರೂ. 6634.96 ಲಕ್ಷ ಸಾಲ ನೀಡಿದ್ದು, ಪ್ರಸಕ್ತ ವರ್ಷದ ಆದಾಯ ತೆರಿಗೆ ಮುಂಗಡ ಪಾವತಿಸಿದ ನಂತರದಲ್ಲಿ ಒಟ್ಟು ರೂ. 92,83,478.08 ಪೈಸೆ ಲಾಭ ಗಳಿಸಿದೆ. ಸದಸ್ಯರಿಗೆ ಶೇ.8ರಷ್ಟು ಲಾಭಾಂಶ ವಿತರಿಸಲಾಗುತ್ತಿದೆ. ಸಾಲಗಾರರು ನಿಯಮಗಳಂತೆ ಸಕಾಲಕ್ಕೆ ಬಡ್ಡಿ, ಸಾಲ ಮರುಪಾವತಿಸಬೇಕು ಎಂದು ಹೇಳಿದರು.
ಪ್ರಧಾನ ವ್ಯವಸ್ಥಾಪಕ ಎಂ.ಜಿ. ಬಮ್ಮಣ್ಣಿ, ಬ್ಯಾಂಕಿನ ಆದಾಯ ವರದಿಗೆ ಸಭೆಯ ಅನುಮೋದನೆ ಬೇಡಿದರು. ನಿರ್ದೇಶಕ ನೆಹರೂ ಪೋರವಾಲ, ಚಾರ್ಟೆಡ್ ಅಕೌಂಟಂಟ್ ಶಿವಲಿಂಗಯ್ಯ ಘಾಳಿಮಠ, ಸದಸ್ಯರು ಪಡೆದ ಸಾಲಗಳನ್ನು ಅವಧಿಯೊಳಗೆ ಪಾವತಿಸುವ ಮೂಲಕ ಬ್ಯಾಂಕಿನ ಪ್ರಗತಿಗೆ ಕೈ ಜೋಡಿಸಬೇಕು ಎಂದರು.
ಉಪಾಧ್ಯಕ್ಷ ಸಿದ್ಲಿಂಗಪ್ಪ ವಡ್ಡೋಡಗಿ, ನಿರ್ದೇಶಕರಾದ ಎಸ್.ಎಸ್. ವಾರದ, ಎಸ್.ಎಸ್. ಸಂಗಮ, ಎಸ್.ಎಮ್. ಜೋಗೂರ, ಆರ್.ಎಸ್. ನಾಗೂರ, ಪಿ.ಬಿ. ಕೋತಿ, ಎಂ.ಸಿ. ಸಿಂದಗಿ, ಡಾ. ವ್ಹಿ.ಜಿ. ವಾರದ, ಎಲ್.ಎಸ್. ದೊಡಮನಿ, ಎನ್.ಡಿ. ಗುಣಾರಿ, ಸಿ.ಜಿ. ಶಹಾಪೂರ, ಎಂ.ಜಿ. ಬಮ್ಮಣ್ಣಿ, ಎಂ.ಸಿ. ಪಟ್ಟಣಶೆಟ್ಟಿ ಇದ್ದರು.
ವ್ಯವಸ್ಥಾಪಕ ಬಿ.ಬಿ. ದೇವೂರ, ಲೆಕ್ಕಿಗ ಯು.ಜಿ ಮರ್ತೂರ, ವಿವಿಧ ಶಾಖೆಯ ಸಿಬ್ಬಂದಿ ಹಾಗೂ ಬ್ಯಾಂಕಿನ ಸದಸ್ಯರಿದ್ದರು.