ಪಾ.ಶ್ರೀ.ಅನಂತರಾಮ್ ಕೋಲಾರ
ಜೆಡಿಎಸ್ ಹಾಗೂ ಕೆಲ ಪೇತರ ಸದಸ್ಯರನ್ನು ಎತ್ತಿಕಟ್ಟಿ ನಗರಸಭೆ ಉಪಾಧ್ಯಕ್ಷ ಪ್ರವಿಣ್ಗೌಡ ವಿರುದ್ಧ ಅವಿಶ್ವಾಸ ಮಂಡಿಸಲು 2 ವಾರಗಳಿಂದ ಹರಸಾಹಸ ಮಾಡುತ್ತಿರುವ ಕಾಂಗ್ರೆಸ್ಗೆ ಓಳೇಟಿನ ಭಯ ಎದುರಾಗಿದ್ದು, ಮರ್ಯಾದೆ ಉಳಿಸುವಂತೆ ಕೈ ಮುಖಂಡರು ಸದಸ್ಯರ ಮನೆ ಬಾಗಿಲು ತಟ್ಟಿ ಅಂಗಲಾಚುತ್ತಿದ್ದಾರೆ ಎನ್ನಲಾಗಿದೆ.
ನಗರಸಭೆ ಉಪಾಧ್ಯಕ್ಷ ಜೆಡಿಎಸ್ನ ಪ್ರವಿಣ್ಗೌಡ ವಿರುದ್ಧ ಅವಿಶ್ವಾಸ ಮಂಡಿಸಲು ಅವಕಾಶ ಕೋರಿ ಕಾಂಗ್ರೆಸ್, ಜೆಡಿಎಸ್ ಹಾಗೂ ಪೇತರ ಸದಸ್ಯರು ಸೇರಿ ಒಟ್ಟು 22 ಮಂದಿ ವಿಶೇಷ ಸಭೆ ಕರೆಯಲು ಅಧ್ಯೆ ಶ್ವೇತಾ ಶಬರೀಶ್ ಅವರನ್ನು ಒತ್ತಾಯಿಸಿದ್ದರು.
ಇಂದು ವಿಶೇಷ ಸಭೆ: ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರು ಏ.7ರಂದು ಬೆಳಗ್ಗೆ 11 ಗಂಟೆಗೆ ನಗರಸಭೆಯಲ್ಲಿ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಮೇಲುಗೈ ಸಾಧಿಸಲು ಹೊರಟಿರುವ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆಯಾದರೂ ಡ್ಯಾಮೇಜ್ ಕಂಟ್ರೋಲ್ ಆಗದ ಮಟ್ಟದಲ್ಲಿ ಗುಂಪುಗಾರಿಕೆ ಕಂಡು ಬಂದಿರುವುದರಿಂದ ಒಗ್ಗಟ್ಟು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ನಗರಸಭೆ ಮಳಿಗೆಗಳನ್ನು ಹರಾಜು ಮೂಲಕ ಬಾಡಿಗೆದಾರರಿಗೆ ಹಂಚಿಕೆ ಮಾಡಿರುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ, ಹಾಲಿ ಕಾಂಗ್ರೆಸ್ ಸದಸ್ಯ ಬಿ.ಎಂ.ಮುಬಾರಕ್ ವಿರುದ್ಧ ಪ್ರವಿಣ್ಗೌಡ ತನಿಖೆಗೆ ಆಗ್ರಹಿಸಿರುವುದು ಹಾಗೂ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಧ್ವನಿ ಎತ್ತಿರುವುದರಿಂದ ಉಪಾಧ್ಯಕ್ಷ ಸ್ಥಾನದಿಂದ ಪ್ರವಿಣ್ಗೌಡರನ್ನು ಕೆಳಗೆ ಇಳಿಸಲು ಪ್ರಯತ್ನ ನಡೆದಿದೆ ಎನ್ನಲಾಗಿದೆ.
ಗುಂಪುಗಾರಿಕೆಯ ಲಾಭಕ್ಕೆ ಯತ್ನ: ಕೇವಲ ಕಾಂಗ್ರೆಸ್ ಸದಸ್ಯರನ್ನು ನಂಬಿಕೊಂಡು ಪ್ರವಿಣ್ಗೌಡರನ್ನು ಅಧಿಕಾರದಿಂದ ಕೆಳಗಿಳಿಸಲು ಕಷ್ಟ ಎಂಬುದನ್ನು ಅರಿತಿರುವ ಮುಬಾರಕ್ ಹಾಗೂ ಕಾಂಗ್ರೆಸ್ ಕೋಲಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ಬಾಬು, ನಗರಸಭೆ ಅಧ್ಯೆ ಜೆಡಿಎಸ್ನ ಶ್ವೇತಾ ಅವರ ಪತಿ ಶಬರೀಶ್ ಅವರನ್ನು ಬಳಸಿಕೊಂಡು ಅವಿಶ್ವಾಸ ಮಂಡನೆಗೆ ಕಸರತ್ತು ನಡೆಸುತ್ತಿದ್ದಾರೆಯಾದರೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮಧ್ಯ ಪ್ರವೇಶ, ಎಸ್ಡಿಪಿಐನ ನಾಲ್ವರು ಸದಸ್ಯರು ತಟಸ್ಥವಾಗಿರುವುದು, ಅವಿಶ್ವಾಸ ಮಂಡನೆಗೆ ಸಹಿ ಮಾಡಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಪೇತರ ಸದಸ್ಯರಲ್ಲಿ ಬಹುತೇಕರು ಗುಂಪುಗಾರಿಕೆಯಿಂದ ಸಭೆಗೆ ಗೈರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದು ನಿಜವೇ ಆದಲ್ಲಿ ಪ್ರವಿಣ್ ಗೌಡಗೆ ಬಿಗ್ ರಿಲೀಫ್ ಸಿಗಬಹುದು.
ಪಕ್ಷಗಳ ಬಲಾಬಲ: ನಗರಸಭೆಯ 35 ಸದಸ್ಯರಲ್ಲಿ ಕಾಂಗ್ರೆಸ್&12, ಬಿಜೆಪಿ&3, ಜೆಡಿಎಸ್ &8, ಎಸ್ಡಿಪಿಐ&4 ಹಾಗೂ ಪೇತರರು 8 ಮಂದಿ ಇದ್ದಾರೆ. ಈ ಪೈಕಿ ಕಾಂಗ್ರೆಸ್ಸಿನಿಂದ 6, ಜೆಡಿಎಸ್ನ &3, ಎಸ್ಡಿಪಿಐನ4 ಹಾಗೂ 2 ಪೇತರರು ಸೇರಿ ಒಟ್ಟು 15 ಮಂದಿ ಮುಸ್ಲಿಂ ಸದಸ್ಯರಿದ್ದು, ಪ್ರವಿಣ್ ವಿರುದ್ಧ ಅವಿಶ್ವಾಸಕ್ಕೆ ಬಹುತೇಕ ಸದಸ್ಯರು ಸಹಿ ಮಾಡಿದ್ದಾರೆಯಾದರೂ ಕಳೆದ ಒಂದು ವಾರದ ರಾಜಕೀಯ ಬೆಳವಣಿಗೆಯಿಂದಾಗಿ ಉಲ್ಟಾ ಹೊಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಪ್ ಜಾರಿಗೆ ಹರಸಾಹಸ: ಜತೆಗೆ ಅವಿಶ್ವಾಸ ಮಂಡನೆಗಾಗಿ ಸಹಿ ಮಾಡಿರುವ 22 ಸದಸ್ಯರ ಪೈಕಿ ಅನೇಕರು ವಿಪ್ ಸ್ವೀಕರಿಸಲು ಹಿಂದೇಟು ಹಾಕಿದ್ದಾರಲ್ಲದೆ ಸಭೆಗೆ ಗೈರಾಗುವ ಮೂಲಕ ಗುಂಪುಗಾರಿಕೆಗೆ ಪ್ರಚೋದನೆ ನೀಡುತ್ತಿರುವವರಿಗೆ ಒಳೇಟು ನೀಡಬಹುದು ಎನ್ನಲಾಗಿದೆ.
ಕಾಂಗ್ರೆಸ್ನಿಂದ ಗೆದ್ದಿರುವ ಸದಸ್ಯರು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಎಂಎಲ್ಸಿ ನಾಸೀರ್ ಅಹಮ್ಮದ್, ಮಾಜಿ ಸಚಿವ ವರ್ತೂರ್ ಪ್ರಕಾಶ್, ಶಾಸಕ ಕೆ.ಶ್ರೀನಿವಾಸಗೌಡ ಅವರೊಟ್ಟಿಗೆ ಗುರುತಿಸಿಕೊಂಡಿದ್ದಾರೆ. ಜೆಡಿಎಸ್ನ ಸದಸ್ಯರಲ್ಲಿ ಅಲ್ಪಸಂಖ್ಯಾತರು, ಪ್ರವಿಣ್ ರಾಜೀನಾಮೆ ನೀಡಿದಲ್ಲಿ ಉಪಾಧ್ಯಕ್ಷ ಸ್ಥಾನ ನಮ್ಮಲ್ಲೇ ಒಬ್ಬರಿಗೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಪ್ರವಿಣ್ ಸಹ ನಮ್ಮ ಪಕ್ಷದವರೇ ಉಪಾಧ್ಯಕ್ಷರಾಗುವುದಾದರೆ ಪದತ್ಯಾಗ ಮಾಡುವುದಾಗಿ ಹೊಸ ಬಾಂಬ್ ಸಿಡಿಸಿರುವುದರಿಂದ ವಿರೋಧಿಗಳು ಮೇಲುಗೈ ಸಾಧಿಸಲು ಹೊಸ ತಂತ್ರಗಳನ್ನು ಹುಡುಕಲಾರಂಭಿಸಿದ್ದಾರೆ.
ಬಿಜೆಪಿ ನಿಲುವು ನಿಗೂಢ: ಬಿಜೆಪಿಯ 3 ಸದಸ್ಯರು ರಹಸ್ಯ ಬಿಟ್ಟುಕೊಟ್ಟಿಲ್ಲ. ಪ್ರವಿಣ್ ಮುಂದುವರಿಯುವ ಅವಕಾಶವಿದ್ದಲ್ಲಿ ಪರವಾಗಿ ಮತ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಎಸ್ಡಿಪಿಐನ 4 ಸದಸ್ಯರು ಪ್ರವಿಣ್ ಪರ ಒಲವು ಹೊಂದಿದ್ದಾರೆಯಾದರೂ ಸಂಸದ ಎಸ್.ಮುನಿಸ್ವಾಮಿ ಜತೆ ಸ್ನೇಹವಿದೆ ಎಂಬ ಕಾರಣಕ್ಕೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ನಿರ್ಧಾರಿಂದ ಹಿಂದಕ್ಕೆ: ಕೋಲಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ಬಾಬು ಏಕ ಪಯ ನಿರ್ಧಾರ ತೆಗೆದುಕೊಳ್ಳುತ್ತಿರುವುದನ್ನು ವಿರೋಧಿಸಿರುವ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜೆ.ಕೆ.ಜಯರಾಮ್ ತಮ್ಮ ಪತ್ನಿ ನಗರಸಭೆ ಸದಸ್ಯೆ ಭಾಗ್ಯಮ್ಮ ಜತೆ ಪಕ್ಷಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿ, ಕೆ.ಎಚ್.ಮುನಿಯಪ್ಪ, ನಾಸೀರ್ ಅಹಮ್ಮದ್ ಅವರ ಸಲಹೆ ಮೇರೆಗೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ವಿಶ್ವಾಸ ಮತಯಾಚನೆ ಬಳಿಕ ತೀರ್ಮಾನ: ಪ್ರವಿಣ್ಗೌಡ ಸೋಲು ಒಪ್ಪಲು ಸಿದ್ಧರಿಲ್ಲ. ಸಂಸದರೊಂದಿಗೆ ಇರುವ ಸ್ನೇಹಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲವೆಂದು ದೃಢಪಡಿಸಿದ್ದಾರೆ. ಕ್ಲಾಕ್ ಟವರ್ನಲ್ಲಿ ರಾಷ್ಟ್ರಧ್ವಜ ಹಾರಿಸುವ ವಿಚಾರದಲ್ಲಿ ನನ್ನ ಪಾತ್ರವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಜೆಡಿಎಸ್ನಿಂದ ಗೆದ್ದಿರುವ ಅಲ್ಪಸಂಖ್ಯಾತರೊಬ್ಬರು ಉಪಾಧ್ಯಕ್ಷರಾದರೆ ಸಹಕರಿಸುವುದಾಗಿ ೂಷಿಸಿದ್ದಾರೆ. ನಗರಸಭೆಯಲ್ಲಿ ನಡೆದಿರುವ ಅಕ್ರಮಗಳ ವಿಚಾರದಲ್ಲಿ ರಾಜಿ ಇಲ್ಲವೆಂದು ಗುಡುಗಿದ್ದಾರೆ. ಗುರುವಾರ ವಿಶ್ವಾಸಮತ ಗೆದ್ದ ಮೇಲೆ ತೆಗೆದುಕೊಳ್ಳಬಹುದಾದ ತೀರ್ಮಾನ ಕುತೂಹಲ ಮೂಡಿಸಿದೆ.