ಜಿಲ್ಲೆ

ವಿಶ್ವಾಸದಿಂದ ಸಹಕಾರಿ ಅಭಿವೃದ್ಧಿ

ಮಾಂಜರಿ: ಗ್ರಾಹಕರ ವಿಶ್ವಾಸ ಗಳಿಸಿದಾಗ ಮಾತ್ರ ಸಹಕಾರಿ ಸಂಘ ಬೆಳೆಯಲು ಸಾಧ್ಯವಾಗುತ್ತದೆ ಎಂದು ಬೋರಗಾಂವ ಅರಿಹಂತ ಉದ್ಯೋಗ ಸಮೂಹದ ರೂವಾರಿ ಉತ್ತಮ ಪಾಟೀಲ ಹೇಳಿದರು.

ಸಮೀಪದ ನಸಲಾಪುರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೋರಗಾಂವ ಶ್ರೀ ಜಿನಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಪ್ರಥಮ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಇಂದು ಸರ್ಕಾರ ಆರ್ಥಿಕ ಸಂಸ್ಥೆಗಳ ಪೈಪೋಟಿಗೆ ಎದುರಾಗುವ ಕಾನೂನು ರಚಿಸುತ್ತಿದೆ. ಸಂಸ್ಥೆಯಲ್ಲಿ ನಿರ್ದೇಶಕರು, ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಹಕರ ವಿಶ್ವಾಸದ ಫಲವಾಗಿ ಸಂಸ್ಥೆಯ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು. ಸಂಘದ ಸದಸ್ಯರು ವಿಶ್ವಾಸದಾಯಕ ಮನೋಭಾವ ಹೊಂದಬೇಕು. ಗ್ರಾಹಕರು ನಮ್ಮ ಮೇಲೆ ವಿಶ್ವಾಸವಿಟ್ಟು ಸೇವೆ ಮಾಡುವ ಅವಕಾಶ ಕೊಟ್ಟಿದ್ದಾರೆ. ಸಂಘದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಬೇಕು. ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.

ಮಾಜಿ ಶಾಸಕ ಕೆ.ಪಿ.ಮಗ್ಗೆನವರ, ಡಾ.ಎನ್.ಎ.ಮಗದುಮ್ ಮಾತನಾಡಿದರು. ಸದಲಗಾ ಗೀತಾಶ್ರಮದ ಶ್ರದ್ಧಾನಂದ ಸ್ವಾಮೀಜಿ, ಶಿಹಣಗದ್ದೆ ಬಸ್ತಿಮಠದ ಸ್ವಸ್ತಿ ಲಕ್ಷ್ಮಿ ಸೇನೆ ಭಟ್ಟಾರಕ ಸ್ವಾಮೀಜಿ, ಸಂಸ್ಥಾಪಕ ಸಾಗರ ಮಿರ್ಜಿ, ಅಧ್ಯಕ್ಷ ಅಜಿತ್ ಪಾಟೀಲ, ಚಿದಾನಂದ ಕೋರೆ ಸಹಕರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಭರತೇಶ ಬನವಣೆ, ಬಾವುಸಾಹೇಬ ಪಾಟೀಲ, ಡಾ.ರಮೇಶ ಖಿಚಡೆ, ಧುಳಗೌಡ ಪಾಟೀಲ ಇತರರಿದ್ದರು.