ಜಿಲ್ಲೆ

ವಿಶ್ವಾರಾಧ್ಯರ ಪಾದಗಟ್ಟೆ ತಲುಪಿದ ಪಾದಯಾತ್ರೆ

ಯಾದಗಿರಿ: ಸಿದ್ದಿ ಪುರುಷ ಶ್ರೀವಿಶ್ವಾರಾಧ್ಯರ ಜನ್ಮ್ಮಕ್ಷೇತ್ರ ಗಂವ್ಹಾರದಿಂದ ಪ್ರತಿವರ್ಷದ ಪದ್ದತಿಯಂತೆ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಡಾ.ಗಂಗಾಧರ ಮಹಾಸ್ವಾಮಿಗಳ ಪರಂಪರಾ ಪಾದಯಾತ್ರೆ ಬುಧವಾರ ತಾಲೂಕಿನ ಅಬ್ಬೆತುಮಕೂರ ಪಾದಗಟ್ಟೆ ತಲುಪಿತು.

3ನೇ ದಿನದ ಪಾದಯಾತ್ರೆ ಅಮಾವಾಸ್ಯೆಯ ವಿಶೇಷ ಪೂಜಾ ವಿಧಾನಗಳನ್ನು ಪಲ್ಲಕ್ಕಿ ಮೂತರ್ಿ ಗಂಗಾಸ್ನಾನ ನೆರವೇರಿಸಿಕೊಂಡು ತರುವಾಯ ಹೋತಪೇಟೆಯ ಮಲ್ಲರೆಡ್ಡಿಗೌಡ, ಶಹಾಪೂರದ ಮರೆಪ್ಪ ಹೈಯ್ಯಾಳಕರ್ ಏರ್ಪಡಿಸಿದ್ದ ಪ್ರಸಾದವನ್ನು ಸ್ವೀಕರಿಸಿ, ಠಾಣಗುಂದಿಯನ್ನು ತಲುಪಿತು. ಅಲ್ಲಿ ಗ್ರಾಮಸ್ಥರು ಏರ್ಪಡಿಸಿದ ಪ್ರಸಾದ ಸ್ವೀಕರಿಸಿ ಸಂಜೆ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಪಾದಗಟ್ಟೆ ತಲುಪಿತು. ಅಲ್ಲಿಪೂರ ಗ್ರಾಮದ ಹಾಗೂ ವಿವಿಧ ಭಕ್ತರಿಂದ ಪ್ರಸಾದ, ಫಲಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಂಜೆ 6 ಗಂಟೆಗೆ ಸಮಸ್ತ ಭಕ್ತರು ನಾಡಿನ ವಿವಿಧ ಮಠಾಶರು, ಸಚಿವರು, ಶಾಸಕರುಗಳು, ರಾಜಕೀಯ ಮುಖಂಡರು, ಸಾಹಿತಿ, ಕಲಾವಿದರು ಪಾದಯಾತ್ರೆಯನ್ನು ಭಕ್ತಿ ಸಡಗರಗಳಿಂದ ಬರಮಾಡಿಕೊಂಡು ್ಟುಂದ ಶ್ರೀ ವಿಶ್ವಾರಾಧ್ಯರ ದೇವಸ್ಥಾನದ ವರೆಗೆ ವಿಶೇಷ ಮೆರವಣಿಗೆಯಲ್ಲಿ ಕರೆದೊಯ್ದರು.

ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ಲಕ್ಷಾಂತರ ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶಾಂತಿ, ಸೌಹಾರ್ದತೆುಂದ ನಡೆದ ಭಕ್ತಿಯ ಈ ಪಾದಯಾತ್ರೆಯನ್ನು ಎಲ್ಲರೂ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದರು. ಪಾದಯಾತ್ರೆಯ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖಾವಾರು ಆರಕ್ಷಕ ಸಿಬ್ಬಂದಿ, ಆರೋಗ್ಯ, ಜೆಸ್ಕಾಂ ಇಲಾಖೆ ಮುಂತಾದವರು ಕಾರ್ಯಕ್ರಮ ಸಾಂಗೋಪಾಂಗವಾಗಿ ನೆರವೇರಲು ಸಹಕರಿಸಿದರು ಎಂದು ಶ್ರೀಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.