ಯಾದಗಿರಿ: ಯಕ್ಷಗಾನ ಕಲೆ ಇಂದು ವಿಶ್ವವ್ಯಾಪಿ ಪಸರಿಸಿದ್ದು, ಇದನ್ನು ಪ್ರತಿಯೊಬ್ಬರೂ ಕಲಿಯಬೇಕು ಎಂದು ಹೆಡಗಿಮದ್ರಾ ಮಠದ ಪೀಠಾಧಿಪತಿ ಶ್ರೀ ಪಂಡಿತಾರಾಧ್ಯ ಶಾಂತ ಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.
ನಗರದ ಹೋಟೆಲï ಮತ್ತು ಬೇಕರಿ ಸಂಘಟನೆಯಿAದ ಸರ್ಕಾರಿ ಪದವಿ ಮಹಾವಿದ್ಯಾಲಯದ ವಿಶ್ವನಾಥರಡ್ಡಿ ಮುದ್ನಾಳ್ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡ ಯಕ್ಷಗಾನ ಕರ‍್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಜನರು ಶ್ರಮಜೀವಿಗಳು. ವಿಶ್ವದ ಎಲ್ಲಡೆ ತಮ್ಮ ಕಾಯಕದೊಂದಿಗೆ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶರಣಗೌಡ ಕಂದಕೂರ, ದಕ್ಷಿಣ ಕನ್ನಡ ಜಿಲ್ಲೆಯ ಕಲಾ ಸಂಸ್ಕೃತಿ ವಿಶಾಲವಾಗಿದೆ. ಯಕ್ಷಗಾನ ಇದೊಂದು ಅದ್ಭುತ ಕಲೆಯಾಗಿದ್ದು, ಇದನ್ನು ನೋಡುವುದರಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದರು.
ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ ಮಾತನಾಡಿ, ಉತ್ತರ ಕರ್ನಾಟಕದ ದೊಡ್ಡಾಟ,ಬೈಲಾಟಗಳಂತೆಯೇ ಕರಾವಳಿ ಪ್ರದೇಶದಲ್ಲಿ ಯP್ಷÀಗಾನ ಕಲೆ ಪ್ರಸಿದ್ಧವಾಗಿದೆ. ಈ ಕಲೆ ಕರವಾಳಿ ಜನರು ಉಳಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಪತ್ರಕರ್ತ ಆನಂದ ಸೌದಿ, ದೇವೇಂದ್ರನಾಥ ನಾದ್, ಹಣಮಂತ ಇಟಗಿ, ಹೋಟೆಲï ಬೇಕರಿ ಸಂಘಟನೆಗಳ ಪದಾಧಿಕಾರಿಗಳಾದ ರೋಹಿತ್, ರಮೇಶ, ಅಶೋಕ ಭಾಗವಹಿಸಿದ್ದರು. ಸದಾಶಿವ ಅಮೀನ್ ನಿರೂಪಿಸಿದರು. ಕರುಣಾಕರ ಸ್ವಾಗತಿಸಿದರು.
ಭಕ್ತಿಯ ಕಡಲಲ್ಲಿ ತೇಲಿಸಿದ ಪ್ರದರ್ಶನ: ಭಾಗವತ ತಂಡದ ಸದಸ್ಯರು ಗಣಪತಿಯ ಪೂಜೆಯೊಂದಿಗೆ ಆರಂಭಿಸಿದ ಪ್ರದರ್ಶನ ಪ್ರೇP್ಷÀಕರಿಗೆ ಭಕ್ತಿಯ ಕಡಲಲ್ಲಿ ತೇಲಿಸಿತು. ತಾಳ, ಗಾಯನ, ನೃತ್ಯ ಸೊಗಸಾಗಿ ಮೂಡಿ ಬಂತ್ತು. ಕರಾವಳಿ ಜನರ ಆರಾಧ್ಯ ದೈವ `ಶಿವದೂತ ಪಂಜುರ್ಲಿ' ವೇಷಧಾರಿ ವೇದಿಕೆಯ ಮುಂಬಾಗಲಿನಿAದ ಕೈಯಲ್ಲಿ ಬೆಂಕಿ ಕೋಲ ಹಿಡಿದು ರುದ್ರನರ್ತನದೊಂದಿಗೆ ಆರ್ಭಟಿಸುತ್ತಾ ಆಗಮಿಸುತ್ತಿದ್ದಂತೆ ಪ್ರೇP್ಷÀಕರು ಶಿಳ್ಳೆ, ಚಪ್ಪಾಳೆ ತಟ್ಟಿ ಭಕ್ತಿಯಿಂದ ದೈವಕ್ಕೆ ನಮಿಸಿದರು.