ಕಲಬುರಗಿ: ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘದಿAದ ನಗರದ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ಆ.೩೧ರಂದು ಸಂಜೆ ೬ಕ್ಕೆ ೧೫ನೇ ವರ್ಷದ ರಂಗವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸಂಸ್ಥಾಪಕ ಡಾ.ವಿಶ್ವರಾಜ ಪಾಟೀಲ್ ತಿಳಿಸಿದರು.
ವಿಶ್ವರಂಗ ತಂಡ ೧೫ ವರ್ಷದಿಂದ ರಂಗಭೂಮಿ ಸೇರಿ ವಿವಿಧ ಸಾಂಸ್ಕೃತಿಕ, ಸಾಹಿತ್ಯಕ, ಕಲಾತ್ಮಕ ಚಟುವಟಿಕೆಗಳನ್ನು ಸೃಜನಾತ್ಮಕವಾಗಿ ಮಾಡುತ್ತಿದೆ. ಅದರ ಭಾಗವಾಗಿ ಪ್ರಸಕ್ತ ವರ್ಷ ಅದ್ದೂರಿಯಾಗಿ ರಂಗವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಂಗವೈಭವ ಕಾರ್ಯಕ್ರಮವನ್ನು ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಉದ್ಘಾಟಿಸಲಿದ್ದು, ಸರ್ವಜ್ಞ ಶಿP್ಷÀಣ ಸಂಸ್ಥೆ ಸಂಸ್ಥಾಪಕ ಪ್ರೊ.ಚನ್ನಾರೆಡ್ಡಿ ಪಾಟೀಲ್, ಡಾ.ಕೆ.ಲಿಂಗಪ್ಪ, ಪತ್ರಕರ್ತ ಶಂಕರ ಕೋಡ್ಲಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಿz್ದÁರೆ. ನೀತಾ ಪಾಟೀಲ್ ಅಧ್ಯP್ಷÀತೆ ವಹಿಸಲಿದ್ದು, ಸುರೇಶ ತಳವಾರ, ಬಸವರಾಜ ಪಾಟೀಲ್ ಅತಿಥಿಗಳಾಗಿದ್ದು, ವಿದೂಷಿ ಅಂಕಿತಾ ಪ್ರಜ್ವಲ್ ಗೌರವ ಉಪಸ್ಥಿತಿ ಇರಲಿದ್ದಾರೆ ಎಂದರು.
ವಿವಿಧ ರಂಗಾಸಕ್ತ ಸಂಘಟನೆಗಳು, ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿವೆ. ಚಿಕ್ಕಮಗಳೂರಿನ ರಾಗ ಮಯೂರಿ ಅಕಾಡೆಮಿಯಿಂದ ಭಕ್ತಿ ಪ್ರಧಾನ, ಜಾನಪದ, ಶಾಸೀಯ, ನೃತ್ಯ ಮನಾಟಕ ಸೇರಿ ವಿವಿಧ ರಂಗಪ್ರಯೋಗಗಳು ನಡೆಯಲಿವೆ ಎಂದು ಹೇಳಿದರು.
ಸುರೇಶ ತಳವಾರ, ಸಮೀರ ಸುಬೇದಾರ, ವಿನೋದ್ ಪಾಟೀಲ್, ಚಂದ್ರಕಾAತ ಇತರರಿದ್ದರು.