ಜಿಲ್ಲೆ

ವಿಶ್ವಮಾನವ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ

ಚಿತ್ರದುರ್ಗ: ನಗರದ ಹೊರವಲಯದ ಸೀಬಾರ-ಗುತ್ತಿನಾಡು ಸಮೀಪದ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ವಿದ್ಯಾಸಂಸ್ಥೆ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಹೃದಯ, ನರ, ಮೂತ್ರಪಿಂಡದ ಕಲ್ಲು, ಕ್ಯಾನ್ಸರ್, ಸ್ತಿಥರೋಗ, ಗರ್ಭಕೋಶ ಸಮಸ್ಯೆ, ಮೂಳೆ ಮತ್ತು ಕೀಲು ರೋಗ, ಕಿವಿ, ಮೂಗು, ಗಂಟಲು, ರಕ್ತದೊತ್ತಡ, ಮಧು ಮೇಹ ಇತರೆ ಸಮಸ್ಯೆಯಿಂದ ಬಳಲುವ ಅನೇಕ ರೋಗಿಗಳ ತಪಾಸಣೆ ನಡೆಯಿತು.

ಇದೇ ವೇಳೆ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಸಂಸ್ಥೆಯ ಆವರಣದಲ್ಲಿ ನಡೆಯಿತು. ಅನೇಕರು ಪಾಲ್ಗೊಂಡು ಸದುಪಯೋಗ ಪಡಿಸಿಕೊಂಡರು.

ವಿಶ್ವಮಾನವ ವಸತಿ ಶಾಲೆ ಮುಖ್ಯಶಿಕ್ಷಕ ಬಿ.ಜಿ.ಶಿವರುದ್ರಯ್ಯ ಉದ್ಘಾಟಿಸಿದರು. ಕಾರ್ಯದರ್ಶಿ ಎಂ.ನೀಲಕಂಠದೇವರು, ರೂವಾರಿ ಎಚ್.ಜಲೀಲ್ ಸಾಬ್, ಮುಖ್ಯ ಶಿಕ್ಷಕ ಜಿ.ಆರ್.ಚನ್ನಬಸಪ್ಪ, ವಿಶ್ವಮಾನವ ಪದವಿ ಪೂರ್ವ ಕಾಲೇಜು ಪ್ರಾಚಾರ್ಯೆ ಸುಧಾ, ತಜ್ಞ ವೈದ್ಯರಾದ ಡಾ.ಅಶ್ವಿನಿ, ಡಾ.ಅನುಷಾ, ಡಾ.ಅಭಿಷೇಕ್, ಡಾ.ಅರುಣ್‌ಕುಮಾರ್, ಡಾ.ಕವಿನ್ ಇತರರಿದ್ದರು.