ಚಿತ್ರದುರ್ಗ: ಕೋಟೆನಗರಿಯಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಸೀಬಾರ-ಗುತ್ತಿನಾಡು ಸಮೀಪದ ವಿಶ್ವಮಾನವ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ಚೆಸ್‌ನಲ್ಲಿ ಪಿ.ನಾಗರಾಜ್ ಹಾಗೂ ಕರಾಟೆ ಸ್ಪರ್ಧೆಯಲ್ಲಿ ಎಚ್.ಸಿ.ಸಮರ್ಥ್, ಜಿ.ಕೆ.ನಂದನ್ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಎಂ.ನೀಲಕಂಠ ದೇವರು, ರೂವಾರಿ ಎಚ್.ಜಲೀಲ್‌ಸಾಬ್, ಮುಖ್ಯಶಿಕ್ಷಕ ಜಿ.ಆರ್.ಚನ್ನಬಸಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.