ಜಿಲ್ಲೆ

ವಿಶ್ವದ ಇತರ ಸಾಹಿತ್ಯಕ್ಕಿಂತ ಕನ್ನಡ ಭಿನ್ನ

ಕಲಬುರಗಿ: ನಮ್ಮ ಕನ್ನಡ ಸಾಹಿತ್ಯ ಜಗತ್ತಿನ ಇತರ ಸಾಹಿತ್ಯಗಳಿಗಿಂತ ಭಿನ್ನವಾಗಿದೆ. ನಾಡಿನ ಸಾಂಸ್ಕೃತಿಕ ವಿಮರ್ಶೆ ಮಾಡುವಲ್ಲಿ ಕಥೆ ಅವಶ್ಯಕ. ದೇಶದ ಎಲ್ಲ ಭಾಷೆಗಳಿಗೆ ಕಥನ ಇದೆ. ಈ ಕಥನದ ಮೂಲಕ ದೇಶದ ಸೀಮೆಗಳ ಚಾರಿತ್ರಿಕ ಪರಂಪರೆ ಮತ್ತು ಮೌಲ್ಯಗಳು ಹುಟ್ಟಿವೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಕನ್ನಡ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಯ ಅಳಿವು ಉಳಿವು ಕುರಿತು ಪ್ರಸ್ತಾಪಿಸುತ್ತ ಬರಲಾಗಿದೆ. ಆದರೆ ಅದ್ಭುತವಾಗಿರುವ ಮಾತೃಭಾಷೆಗೆ ಎಂದಿಗೂ ಕುತ್ತು ಬರಲ್ಲ ಎಂದರು.

ಇಂಗ್ಲಿಷ್ ಶಾಲೆಗಳು ಬಂದಾಗ ತುಸು ಭಯ ಉಂಟಾಗಿತ್ತು. ಆದರೂ ನಮ್ಮ ಭಾಷೆಗೆ ಧಕ್ಕೆಯಾಗಿಲ್ಲ. ತಾಯಿಯಿಂದ ಆರಂಭವಾಗುವ ವಿದ್ಯೆ ಮತ್ತು ಸಂಸ್ಕೃತಿ ನಮ್ಮ ಬದುಕಿನ ಸಾಂಸ್ಕೃತಿಕ ಲೋಕಕ್ಕೆ ಕಾರಣ. ಜಗತ್ತಿನ ಸಾಹಿತ್ಯ ಉz್ದೆÃಶವೇ ಬೇರೆ. ನಮ್ಮ ಸಾಹಿತ್ಯದ ಉ ಶವೇ ಬೇರೆ. ನಮ್ಮದು ರಸಾನುಭವ ಸಾಹಿತ್ಯ ಎಂದು ವಿಶ್ಲೇಷಿಸಿದರು.
ಹೃದಯದಲ್ಲಿನ ಕ್ರಿಯಾಶೀಲತೆ ಮತ್ತು ಸಂವೇದನಾಶೀಲ ಮನಸ್ಸುಗಳಿದ್ದರೆ ಬರಹ ಮೂಡುತ್ತದೆ ಎಂದು ರಾವೂರಿನ ಶ್ರೀ ಸಚ್ಚಿದಾನಂದ ಶಾಲಾ ಮಕ್ಕಳ ಪ್ರಶ್ನೆಗೆ ಉತ್ತರಿಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ನಾಡಿನ ಸಾಂಸ್ಕೃತಿಕ ಪ್ರತಿನಿಧಿಯಾಗಿರುವ ಸಾಹಿತಿಗಳ ಮೇಲೆ ಆರೋಪ, ಹಲ್ಲೆ, ಬೆದರಿಕೆ ಕೇಳಿ ಬರುತ್ತಿವೆ. ಸತ್ಯ ಹೇಳುವ ಸಾಹಿತಿಗಳಿಗೆ ಜೀವ ಬೆದರಿಕೆ ಒಡ್ಡುತ್ತಿರುವುದರಿಂದ ಸಮಾಜದಲ್ಲಿ ಕಲುಷಿತಗೊಳ್ಳುತ್ತಿದ್ದು, ತಿಳಿಗೊಳಿಸಲು ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗಬೇಕು. ಸತ್ಯ ಹೇಳುವ ಸಾಹಿತಿ, ಕಲಾವಿದರ ಬೆನ್ನಿಗೆ ನಿಂತು ಸಾಹಿತ್ಯಕ್ಕೆ ಮತ್ತಷ್ಟು ಜೀವ ತುಂಬಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತಿ ಡಾ.ವಿಕ್ರಮ ವಿಸಾಜಿ ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಪ್ರಮುಖರಾದ ಡಾ.ಸ್ವಾಮಿರಾವ ಕುಲಕರ್ಣಿ, ಡಾ.ವಾಸುದೇವ ಸೇಡಂ, ಕೆ.ಎಸ್.ಬಂಧು, ಸುಬ್ರಾವ್ ಕುಲಕರ್ಣಿ, ಯಶವಂತರಾಯ ಅಷ್ಟಗಿ, ಶರಣರಾಜ ಛಪ್ಪರಬಂದಿ, ಧರ್ಮಣ್ಣ ಧನ್ನಿ, ಶಕುಂತಲಾ ಪಾಟೀಲ್, ವಿನೋದ ಜನೇವರಿ, ರಾಜೇಂದ್ರ ಮಾಡಬೂಳ, ಬಸವರಾಜ ಜಾನೆ, ಡಾ.ರೆಹಮಾನ್ ಪಟೇಲ್, ಡಾ.ಕೆ.ಗಿರಿಮಲ್ಲ, ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಎಸ್.ಕೆ. ಬಿರಾದಾರ್, ಪ್ರಭುಲಿಂಗ ಮೂಲಗೆ, ಅಮೃತ ಬಡಿಗೇರ, ಮಾನಯ್ಯ ಬಡಿಗೇರ, ಸಿದ್ಧಲಿಂಗ ಬಾಳಿ, ಡಾ.ಮಲ್ಲಿನಾಥ ತಳವಾರ, ಕಲ್ಯಾಣಕುಮಾರ ಶೀಲವಂತ, ದತ್ತಾತ್ರೇಯ ವಿಶ್ವಕರ್ಮ, ದೇವೇಂದ್ರಪ್ಪ ಆವಂಟಿ, ಪಂಡಿತ ನೆಲ್ಲಗಿ, ನರಸಿಂಗರಾವ ಹೇಮನೂರ, ಶಿವಾನಂದ ಮಠಪತಿ, ಭೀಮರಾಯ ಹೇಮನೂರ, ಡಾ.ಬಾಬುರಾವ ಶೇರಿಕಾರ, ವಿಶ್ವನಾಥ ತೊಟ್ನಳ್ಳಿ, ಶರಣಬಸಪ್ಪ ನರೂಣಿ, ಕವಿತಾ ಪಾಟೀಲ್, ಮಂಜುಳಾ ಪಾಟೀಲ್, ಶಿಲ್ಪಾ ಜೋಶಿ, ಮಂಜುನಾಥ ಕಂಬಾಳಿಮಠ ಇತರರಿದ್ದರು.