ಕಮಲನಗರ: ಕಾಯಕ ಮತ್ತು ದಾಸೋಹ ತತ್ವವನ್ನು ಉಣಬಡಿಸಿದ ವಿಶ್ವಗುರು ಬಸವಣ್ಣನವರು ಸಮಾನತೆ ಹರಿಕಾರರು. ಜಾತ್ಯಾತೀತ ಸಮಾಜದಿಂದ ಸರ್ವರಿಗೆ ಸಮಪಾಲು ಮತ್ತು ಸಮಬಾಳು ತತ್ವಗಳು ಮನುಕುಲದ ಪ್ರಗತಿಗೆ ಕಾರಣವಾಗಿದೆ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.
ಕಾಳಗಾಪುರ ಗ್ರಾಮದಲ್ಲಿ ಶನಿವಾರ ವಿಶ್ವಗುರು ಬಸವಣ್ಣನವರ ಪ್ರತಿಮೆ ಅನಾವರಣ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರು ೧೨ನೇ ಶತಮಾನದಲ್ಲಿ ಸಮಾನತೆ ಸಮಾಜ ಕಟ್ಟಲು ಶ್ರಮಿಸಿದ್ದರು. ಜಗತ್ತಿಗೆ ಜೀವನ ಹಾಗೂ ಮಾನವೀಯ ಮೌಲ್ಯಗಳನ್ನು ನೀಡಿದ್ದರು. ಸಾಂಸ್ಕೃತಿಕ ರಾಯಭಾರಿ ವಿಶ್ವಗುರು ಬಸವಣ್ಣನವರು ಕಲ್ಯಾಣ ರಾಜ್ಯದ ನಿರ್ಮಾಪಕರು. ಮೂಢನಂಬಿಕೆ ಮತ್ತು ಅಸ್ಪಶೃತೆ ವಿರುದ್ದ ಹೋರಾಡಿ ಜಗತ್ತಿಗೆ ಸಮನ್ವಯತೆ ತತ್ವಗಳನ್ನು ನೀಡಿದರು. ಸತ್ಯ ಶುದ್ದ ಕಾಯಕದಿಂದ ಜೀವನದಲ್ಲಿ ಸದಾ ಯಶಸ್ವಿ ಸಾಧ್ಯವಾಗುತ್ತದೆ. ಲಿಂಗೈಕ್ಯ ಡಾ.ಚನ್ನಬಸವಪಟ್ಟದ್ದೇವರ ಕಾಯಕ ಮತ್ತು ತತ್ವ ಪ್ರಚಾರ ಮತ್ತು ಪ್ರಸಾರದಿಂದ ಗಡಿ ಭಾಗದಲ್ಲಿ ಕನ್ನಡ ಭಾಷೆ ಬೆಳವಣಿಗೆ ಸಾಧ್ಯವಾಯಿತ್ತು. ಗ್ರಾಮದ ಯಾವುದೇ ಸಮಸ್ಯೆಗಳಿದ್ದಲ್ಲಿ ತಕ್ಷಣ ಪರಿಹರಿಸಲಾಗುತ್ತದೆ ಎಂದರು.
ಗ್ರಾಮದ ರಮೇಶ ಬಿರಾದಾರ, ಸಾಕ್ಷಿ , ವಿಜಯಕುಮಾರ ಬಿರಾದಾರ, ಅನಂತ ಬಿರಾದಾರ, ಕಮಲನಗರದ ಸಂತೋಷ ಬಿರಾದಾರ, ದತ್ತು ಪಾಟೀಲ, ಗೋರಕ, ರವಿ ರಮೇಶ ಬಿರಾದಾರ ಮತ್ತು ಶರಣೆಯರು ಇದ್ದರು. ಅಶೋಕ ಪಾಟೀಲ ನಿರೂಪಣೆ ಮಾಡಿದರು.