ಕುಶಾಲನಗರದ ಕಾರು ನಿಲ್ದಾಣದಲ್ಲಿ ಶನಿವಾರ ಆಯೋಜಿಸಿದ್ದ ದಾಸೋಹ ದಿನ ಕಾರ್ಯಕ್ರಮವನ್ನು ಜಯವರ್ಧನ ಉದ್ಘಾಟಿಸಿದರು. ಚ್.ವಿ.ಶಿವಪ್ಪ, ಶಾಂಭಶಿವಮೂರ್ತಿ, ಮಹಾದೇವಪ್ಪ, ಲೇಖನಾ, ಎಂ.ಬಿ.ಸುರೇಶ್ ಇದ್ದರು.  
ಜಿಲ್ಲೆ

ವಿಶ್ವಕ್ಕೆ ಸಿದ್ಧಗಂಗಾ ಮಠ ಮಾದರಿ


ಕುಶಾಲನಗರ: ಜಾತಿ ಮತ್ತು ಧರ್ಮವನ್ನೂ ಮೀರಿ ಸಹಾಯಹಸ್ತ ಚಾಚಿದ ಡಾ.ಶಿವಕುಮಾರ ಶ್ರೀಗಳ ನೇತೃತ್ವದ ಸಿದ್ಧಗಂಗಾ ಮಠ ವಿಶ್ವಕ್ಕೆ ಮಾದರಿ ಎಂದು ಪುರಸಭೆ ಅಧ್ಯಕ್ಷ ಬಿ.ಜಯವರ್ಧನ ಅಭಿಪ್ರಾಯಪಟ್ಟರು.

ಇಲ್ಲಿನ ಕಾರು ನಿಲ್ದಾಣದಲ್ಲಿ ಶನಿವಾರ ವೀರಶೈವ ಸಮಾಜ ವತಿಯಿಂದ ಆಯೋಜಿಸಿದ್ದ ದಾಸೋಹ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಡೆದಾಡುವ ದೇವರು ಎಂದು ಕರೆಯಲ್ಪಡುವ ಶ್ರೀಗಳು ವಿಶ್ವಕ್ಕೆ ಮಾದರಿ. ಅವರು ಮಾಡಿರುವ ಕೆಲಸಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಪಟ್ಟಣದಲ್ಲಿನ ಪಾರ್ಕ್ ಮತ್ತು ಉದ್ಯಾನಕ್ಕೆ ಪೂಜ್ಯರ ಹೆಸರು ಇಡಲಾಗಿದೆ ಎಂದು ತಿಳಿಸಿದರು.

1960 ರಲ್ಲಿ ಆಹಾರ ಕೊರತೆಯಾಗಿದ್ದ ಸಂದರ್ಭದಲ್ಲಿ ಪ್ರತಿಯೊಂದು ಗ್ರಾಮದ ಮನೆಗೆ ತೆರಳಿ ಆಹಾರ ಸಂಗ್ರಹಿಸಿ ಮಠಕ್ಕೆ ಬರುವ ಭಕ್ತರಿಗೆ ಕೊಡುತ್ತಿದ್ದರು. ಅಂತಹವರ ದರ್ಶನ ಮಾಡಿದ ನಾವುಗಳು ಧನ್ಯರು ಎಂದು ತಿಳಿಸಿದರು.

ವೀರಶೈವ ಸಮಾಜದ ಕೊಡಗು ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ದಿನವನ್ನು ಸರ್ಕಾರ ದಾಸೋಹ ದಿನವನ್ನಾಗಿ ಘೋಷಿಸಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಸಾರ್ವಜನಿಕರಿಗೆ ಅನ್ನ ಪ್ರಸಾದ ವಿತರಿಸಲಾಯಿತು. ಪುರಸಭೆ ಸದಸ್ಯ ಎಂ.ಬಿ.ಸುರೇಶ್, ವೀರಶೈವ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂಭಶಿವಮೂರ್ತಿ, ಅಕ್ಕನ ಬಳಗದ ಕಮಲಮ್ಮ, ಕದಲಿ ವೇದಿಕೆ ಅಧ್ಯಕ್ಷೆ ಲೇಖನಾ, ಕಾರ್ಯದರ್ಶಿ ಮನು, ತಾಲೂಕು ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕ ನಾಗರಾಜ್, ಕೊಡಗು ಜಿಲ್ಲಾ ಲ್ಯಾಬ್ ಟೆಕ್ನಿಷಿಯನ್ ಸಂಘದ ಅಧ್ಯಕ್ಷ ನಟರಾಜ್, ಮಹಾದೇವಪ್ಪ, ಕುಮಾರ್ ಇತರರು ಹಾಜರಿದ್ದರು.