ಜಿಲ್ಲೆ

ವಿಶ್ವಕ್ಕೆ ಭಾರತೀಯ ಯುವಕರ ಕೊಡುಗೆ ಅಪಾರ

ಮದ್ದೂರು: ವಿಶ್ವದ ಪ್ರಗತಿಯಲ್ಲಿ ಭಾರತೀಯ ವಿದ್ಯಾವಂತ ಯುವಕರ ಕೊಡುಗೆ ಅಪಾರವಾಗಿದೆ ಎಂದು ಅನಿವಾಸಿ ಭಾರತೀಯ ಹಾಗೂ ಎಚ್.ಕೆ.ವೀರಣ್ಣಗೌಡ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಚ್.ಕೆ. ಮರಿಯಪ್ಪ ಹೇಳಿದರು.


ಪಟ್ಟಣದ ಶಾಂತಮರಿಯಪ್ಪ ಕಾನ್ವೆಂಟ್‌ನಲ್ಲಿ ಮಂಡ್ಯ ಪಿ.ಡಿ.ಎಫ್. ಲಯನ್ಸ್ ಸಂಸ್ಥೆ ವತಿಯಿಂದ ಗುರುವಾರ ಕಸ್ತೂರ ಬಾ ಉನ್ನತ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ವಿಶ್ವದಲ್ಲೇ ಅತಿ ಹೆಚ್ಚು ಯುವ ಸಂಪನ್ಮೂಲ ಹೊಂದಿರುವ ಭಾರತ ಮುಂದಿನ ದಿನಗಳಲ್ಲಿ ಮುಂದುವರಿದ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಭಾರತೀಯ ನೆಲದಲ್ಲಿ ಪ್ರತಿಭಾನ್ವಿತರಿಗೆ ಕೊರತೆಯಿಲ್ಲ. ಆದರೆ ಅವರನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಶಿಕ್ಷಕರ ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಹೇಳಿದರು.


ಲಯನ್ಸ್ ಸಂಸ್ಥೆಯ ಅಧ್ಯಕ್ಷ ಸಿ. ಅನಂತಕುಮಾರ್, ಸಾಹಿತಿಗಳಾದ ಭೈರಮಂಗಲ ರಾಮೇಗೌಡ, ಗೋಪಾಲಯ್ಯ, ನಿವೃತ್ತ ಇಂಜಿನಿಯರ್ ಮಾದಯ್ಯ, ಎಂ.ಎಚ್.ಚನ್ನೇಗೌಡ, ಸಿ. ಅಪೂರ್ವಚಂದ್ರ, ಲಯನ್ ಪದಧಾಧಿಕಾರಿಗಳಾದ ರಜತ್, ಹರ್ಷ, ಶಿವಕುಮಾರ್, ಶರತ್, ಮಂಜು ಹಾಜರಿದ್ದರು.