ದಾವಣಗೆರೆ: ವಿಶ್ವಕರ್ಮ ಸಮಾಜಕ್ಕೆ ಸರ್ಕಾರಗಳು ಮುಂಬರುವ ದಿನಗಳಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡಬೇಕಿದೆ ಎಂದು ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಎಚ್.ವಿ. ಸತೀಶ್‌ಕುಮಾರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಗವಾನ್ ಶ್ರೀ ವಿಶ್ವಕರ್ಮ ಮಹೋತ್ಸವದಲ್ಲಿ ಮಾತನಾಡಿದರು.
ದೇಶ ಮತ್ತು ವಿಶ್ವ ನಿರ್ಮಾಣದಲ್ಲಿ ವಿಶ್ವಕರ್ಮ ಸಮಾಜ ಪ್ರಮುಖ ಪಾತ್ರ ವಹಿಸಿದೆ. ರೈತರು-ಕಾರ್ಮಿಕರಿಗೆ ಅವಶ್ಯಕ ಸಲಕರಣೆಗಳನ್ನು ತಯಾರಿಸುತ್ತಿದೆ. ದೇಶದಲ್ಲಿ 15 ಕೋಟಿ, ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಸಮಾಜದ ಜನಸಂಖ್ಯೆಯಿದ್ದು, ಶೇ.90ಕ್ಕಿಂತ ಹೆಚ್ಚು ಮಂದಿ ಮೂಲ ವೃತ್ತಿಯನ್ನು ನಂಬಿದ್ದಾರೆ. ಸಮಾಜಕ್ಕೆ ಸ್ಥಾನಮಾನ ಬೇಕಿದೆ ಎಂದರು.
ವಿಶ್ವಕರ್ಮ ಪರಿಷತ್ ರಾಜ್ಯ ಕಾರ್ಯಾಧ್ಯಕ್ಷ ಎ.ಬಿ.ರವಿ ಮಾತನಾಡಿ ದೇಶಾದ್ಯಂತ ವಿಶ್ವಕರ್ಮ ಜಯಂತಿಯನ್ನು ಹಬ್ಬದಂತೆ ಆಚರಿಸಲಾಗುತ್ತಿದೆ. ಎಲ್ಲ ಕುಶಲಕರ್ಮಿಗಳು ಸಾಧನ-ಸಲಕರಣೆಗಳನ್ನು ಪೂಜಿಸುತ್ತಿದ್ದಾರೆ ಎಂದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ ಸಮಾಜದ ಪ್ರಮುಖರು ಕಾಣೆಯಾಗುತ್ತಿರುವ ವೃತ್ತಿಗಳನ್ನು ಕಾಪಾಡಿಕೊಳ್ಳಬೇಕಿದೆ. ಸರ್ಕಾರದ ಸೌಲಭ್ಯದೊಂದಿಗೆ ಕಾರ‌್ಯಕ್ರಮ ರೂಪಿಸಬೇಕೆಂದರು.
ವಿಶ್ವಕರ್ಮ ಪರಿಷತ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಷಣ್ಮುಖಾಚಾರ್,ಎಚ್.ಎನ್.ಜಯಾಚಾರ್, ಶಾಮನೂರು ನಾಗರಾಜಾಚಾರ್, ಸೋಮಶೇಖರಾಚಾರ್, ರಾಂಪುರ ಪ್ರಕಾಶಾಚಾರ್, ಸುರೇಶಾಚಾರ್, ಆರ್.ವೀರಣ್ಣ, ಕಾಡಜ್ಜಿ ಕಾಳಾಚಾರ್, ಬಿಸಲೇರಿ ಮೌನೇಶಾಚಾರ್, ಬಿ.ಎಚ್.ವೀರಭದ್ರಪ್ಪ, ನಾಗರಾಜ್ ಜಮ್ನಳ್ಳಿ, ಎಲ್.ಎಂ.ಎಚ್. ಸಾಗರ್, ಸುಭಾನ್ ಸಾಬ್, ನಂಜಾನಾಯ್ಕ, ಗುರುರಾಜ್, ಡೋಲಿ ಚಂದ್ರು, ಯತಿರಾಜ್, ನಲ್ಕುಂದ ಹಾಲೇಶ್, ಹರೀಶ್, ರಾಕೇಶ್, ರಾಜೇಶ್ವರಿ, ಉಮಾ ತೋಟಪ್ಪ, ಗೀತಾ ಪ್ರಶಾಂತ್ ಇದ್ದರು.
--