ಚಿಕ್ಕಮಗಳೂರು ವಿಶ್ವಕರ್ಮ ಕೈಗಾರಿಕಾ ಮತ್ತು ವಿವಿದೋz್ದÉÃಶ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಪಿ.ರತೀಶ್ ಮತ್ತು ಉಪಾಧ್ಯಕ್ಷರಾಗಿ ಸಿ.ಜೆ.ಬಾಲಕೃಷ್ಣ ಅವರನ್ನು ಸಂಘದ ನಿರ್ದೇಶಕರು ಅಭಿನಂದಿಸಿದರು.  
ಜಿಲ್ಲೆ

ವಿಶ್ವಕರ್ಮ ಸಹಕಾರ ಸಂಘಕ್ಕೆ ರತೀಶ್ ಅಧ್ಯಕ್ಷ

ಚಿಕ್ಕಮಗಳೂರು: ವಿಶ್ವಕರ್ಮ ಕೈಗಾರಿಕಾ ಮತ್ತು ವಿವಿದೋz್ದೆÃಶ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಪಿ.ರತೀಶ್ ಮತ್ತು ಉಪಾಧ್ಯಕ್ಷರಾಗಿ ಸಿ.ಜೆ.ಬಾಲಕೃಷ್ಣ ಶನಿವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ರತೀಶ್ ಮತ್ತು ಶಂಕರಯ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಾಲಕೃಷ್ಣ ಮತ್ತು ಪರಮೇಶ್ವರ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಚುನಾವಣೆಯಲ್ಲಿ ೧೪ ನಿರ್ದೇಶಕರ ಪೈಕಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಪರವಾಗಿ ತಲಾ ೮ ಮತಗಳು ಚಲಾವಣೆಗೊಂಡು ವಿಜಯ ಸಾಧಿಸಿದರು. ಚುನಾವಣಾಧಿಕಾರಿಯಾಗಿ ಡಿ.ಟಿ.ನಾಗರಾಜ್ ಕಾರ್ಯನಿರ್ವಹಿಸಿದರು.

ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಬಿ.ಪಿ.ರತೀಶ್, ವಿಶ್ವಕರ್ಮ ಸಮುದಾಯಕ್ಕೆ ಸರ್ಕಾರದಿಂದ ದೊರೆಯುವ ಸವಲತ್ತು ಒದಗಿಸುವ ಮುಖಾಂತರ ಜನಾಂಗದ ಏಳಿಗೆಗೆ ಶ್ರಮಿಸಲಾಗುವುದು. ಜಿಲ್ಲಾ ಭಾಗದಲ್ಲಿ ಜನಾಂಗವನ್ನು ಗುರುತಿಸಿ, ಸದಸ್ಯರನ್ನಾಗಿಸಿ ಸಂಘವನ್ನು ಇನ್ನಷ್ಟು ಬಲಿಷ್ಟಗೊಳಿಸಲಾಗುವುದು ಎಂದರು.

ಕೇAದ್ರ ಸರ್ಕಾರದ ವಿಶ್ವಕರ್ಮ ಯೋಜನೆಯಲ್ಲಿ ಜನಾಂಗದವರಿಗೆ ಅನೇಕ ಸೌಲಭ್ಯಗಳಿವೆ. ಅರಿವಿನ ಕೊರತೆಯಿಂದ ಹೆಚ್ಚು ಮಾಹಿತಿ ದೊರೆತಿಲ್ಲ. ಹೀಗಾಗಿ ಸದ್ಯದಲ್ಲೇ ವಿಶ್ವಕರ್ಮ ಯೋಜನೆಗಳ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಂಡು ಸಕಲ ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾಗಿ ಎಸ್.ಪಿ.ಓಂಕಾರಮೂರ್ತಿ, ಎಂ.ಜೆ.ಚAದ್ರಶೇಖರ್, ಪರಮೇಶ್ವಚಾರ್, ಎಂ.ಜೆ.ಮಹೇಶ್, ಬಿ.ಚಂದ್ರಶೇಖರ್, ಎಂ.ಉಮಾಶAಕರ್, ಎನ್.ಎಸ್.ಜಗದೀಶಾಚಾರ್ಯ, ಎಸ್.ಕೆ.ಶಂಕರಯ್ಯಚಾರ್ಯ, ಆರ್.ಅಶ್ವಿಕ್, ಸಿ.ವೀಣಾ, ಸೂರ್ಯಗೋವಿಂದ್, ವೀರಭದ್ರಾಚಾರ್ ಆಯ್ಕೆಯಾಗಿದ್ದಾರೆ.