ಚಿತ್ರದುರ್ಗ: ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆ ಎಲ್ಲಾ ಸಮುದಾಯಗಳ ಬಡವರಿಗೂ ತಲುಪಬೇಕು. ಈ ಮೂಲಕ ಇದರ ಯಶಸ್ಸಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಲಹೆ ನೀಡಿದರು.
ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಪದಾಧಿಕಾರಿಗಳ ಜಿಲ್ಲಾಮಟ್ಟದ ಸಭೆಯಲ್ಲಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕಿದೆ. ಹೀಗಾಗಿ ದೇಶದ ಸರ್ವಾಂಗೀಣ ಅಭಿವೃದ್ಧಿ, ರಕ್ಷಣೆಗೆ ಅವರೇ ಗ್ಯಾರಂಟಿ ಎಂದು ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ರಾಮಮಂದಿರ ಉದ್ಘಾಟನೆ ಅಂಗವಾಗಿ ಪ್ರತಿಯೊಬ್ಬ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಆಹ್ವಾನ ಪತ್ರಿಕೆ ನೀಡಬೇಕು. ಬಿಜೆಪಿಯ ಜನಪರ, ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಮುಖಂಡರಾದ ನರೇಂದ್ರ, ಜೈಪಾಲಯ್ಯ, ರಾಜೇಶ್ ಬುಡೆಕಟ್ಟೆ, ಸಂಪತ್‌ಕುಮಾರ್, ರಘುಚಂದನ್, ಜಿ.ಎಸ್.ಅನಿತ್‌ಕುಮಾರ್, ಸಿದ್ಧಾರ್ಥ್ ಗುಂಡಾರ್ಪಿ, ಜಿ.ಟಿ.ಸುರೇಶ್, ಮಲ್ಲಿಕಾರ್ಜುನ್, ನವೀನ್ ಚಾಲುಕ್ಯ, ಕಲ್ಲೇಶಯ್ಯ, ಜೆ.ಎಸ್.ಶಂಭು, ಕಿರಣ್, ಯಶವಂತ್, ರೇಖಾ, ನಾಗರಾಜ್ ಬೇದ್ರೆ, ಶಿವಪ್ರಕಾಶ್ ದಗ್ಗೆ, ಛಲವಾದಿ ತಿಪ್ಪೇಸ್ವಾಮಿ ಇತರರಿದ್ದರು.