ಕಲಬುರಗಿ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಸೇರಿ ವಿಶ್ವಕರ್ಮ ಸಮಾಜದ ಎಲ್ಲ ಸಂಘಟನೆಗಳು ಒಟ್ಟಾಗಿ ಜಿಲ್ಲಾಡಳಿತದೊಂದಿಗೆ ಸೆ.೧೭ರಂದು ವಿಶ್ವಕರ್ಮ ಜಯಂತ್ಯುತ್ಸವವನ್ನು ಅರ್ಥಪೂರ್ಣ ಮತ್ತು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಹಾಸಭಾ ಉಸ್ತುವಾರಿ ಅಶೋಕ ಪೊದ್ದಾರ ಹೇಳಿದರು.
ಸೆ.೧೭ರಂದು ಬೆಳಗ್ಗೆ ನಗರದ ಸಂಘತ್ರಸವಾಡಿಯಲ್ಲಿನ ಶ್ರೀ ಕಾಳಿಕಾದೇವಿ ಮಂದಿರದಲ್ಲಿ ಬೆಳಗ್ಗೆ ೬ಕ್ಕೆ ವಿಶ್ವಕರ್ಮ ಸುಪ್ರಭಾತ, ವಿಶ್ವಕರ್ಮ ಧ್ವಜಾರೋಹಣ, ಶ್ರೀ ಗಣಪತಿ ಸಹಿತ ಪಂಚಬ್ರಹ್ಮ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ನಡೆಯಲಿದೆ. ಬೆಳಗ್ಗೆ ೯ಕ್ಕೆ ಕಾಳಿಕಾ ದೇವಿ ಮಂದಿರದಿAದ ಡಾ.ಎಸ್.ಎಂ.ಪAಡಿತ್ ರಂಗಮAದಿರದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಧ್ಯಾಹ್ನ ೨ಕ್ಕೆ ಡಾ.ಎಸ್.ಎಂ.ಪAಡಿತ್ ರಂಗಮAದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಶ್ರೀ ಸುರೇಂದ್ರ ಸ್ವಾಮೀಜಿ, ಶ್ರೀ ದೊಡ್ಡೇಂದ್ರ ಸ್ವಾಮೀಜಿ, ಶ್ರೀ ಪ್ರಣವ ನಿರಂಜನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಉತ್ಸವ ಸಮಿತಿಗೆ ಶ್ರೀರಾಮಚಂದ್ರ ವಿಶ್ವಕರ್ಮ ಅಧ್ಯಕ್ಷರಾಗಿದ್ದಾರೆ. ಡಾ.ಕೈಲಾಸಪತಿ ವಿಶ್ವಕರ್ಮ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಜಯAತ್ಯುತ್ಸವ ನಿಮಿತ್ತ ಸೆ.೧೬ರಂದು ವೀರೇಂದ್ರ ಪಾಟೀಲ್ ಬಡಾವಣೆಯಿಂದ ಮತ್ತು ಹೈಕೋರ್ಟ್ ಬಳಿಯ ಶಾಂತಾ ಹಾಸ್ಪಿಟಲ್ ಬಳಿಯಿಂದ ಎರಡು ಬೈಕ್ ರ‍್ಯಾಲಿ ಕಳಿಕಾ ಮಂದಿರದವರೆಗೆ ನಡೆಯಲಿವೆ ಎಂದು ತಿಳಿಸಿದರು.
ವಿವಿಧ ಬೇಡಿಕೆ ಮಂಡಿಕೆ
ಜಯAತ್ಯುತ್ಸವದಲ್ಲಿ ಭಾಗವಹಿಸುವ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸಮಾಜದ ವಿವಿಧ ಬೇಡಿಕೆಗಳ ಗಮನಕ್ಕೆ ತರಲಾಗುವುದು. ಕಲಬುರಗಿ ವಿಮಾನ ನಿಲ್ದಾಣಕ್ಕೆ ವಿಶ್ವಕರ್ಮ ನಾಮಕರಣ ಮಾಡಬೇಕು, ತಿಂಥಿಣಿ ಮೌನೇಶ್ವರರ ಅಧ್ಯಯನ ಪೀಠ ಸ್ಥಾಪಿಸಬೇಕು, ವಸ್ತು ಕಲಾ ಪ್ರದರ್ಶನಕ್ಕೆ ಸೂರು ಕಲ್ಪಿಸಬೇಕು, ಪಂಚಕಸುಬು ಮಾಡಿದ ನಿವೃತ್ತರಿಗೆ ಮಾಸಾಶನ ನೀಡಬೇಕು, ಮರಗೆಲಸದವ ಕಟ್ಟಿಗೆ ಅಗ್ನಿ ಅವಘಡಗಳಿಗೆ ಸಿಎಂ ನಿಧಿ ಅಳವಡಿಸಬೇಕು, ಆಭರಣದಂಗಡಿಯವರಿಗೆ ಪೊಲೀಸರ ಕಿರುಕುಳ ತಪ್ಪಿಸಬೇಕು, ರಂಗಮAದಿರದ ಎದುರು ಡಾ.ಎಸ್.ಎಂ.ಪAಡಿತರ ಪುತ್ಥಳಿ ನಿರ್ಮಿಸಬೇಕು, ವೀರೇಂದ್ರ ಪಾಟೀಲ್ ಬಡಾವಣೆಯ ಉದ್ಯಾನಕ್ಕೆ ವಿಶ್ವಕರ್ಮರ ನಾಮಕರಣ ಮಾಡಬೇಕು, ವಿಶ್ವಕರ್ಮ ನಿಗದಲ್ಲಿನ ೮೨ ಕೋಟಿ ರೂ. ಸಾಲ ಮನ್ನಾ ಮಾಡಬೇಕು, ನಿಗಮಕ್ಕೆ ೨೦೦ ಕೋಟಿ ರೂ. ನೀಡಬೇಕು ಎಂದು ಅಶೋಕ ಪೊದ್ದಾರ ಆಗ್ರಹಿಸಿದರು.