ಜಿಲ್ಲೆ

ವಿಶ್ವಕರ್ಮ ಜಯಂತಿ ಸೆ.17ರಂದು

ಕೊಪ್ಪಳ: ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವ ಇದ್ದು, ಸೆ.21ರಂದು ಪ್ರಸಕ್ತ ಸಾಲಿನ ವಿಶ್ವಕರ್ಮ ಜಯಂತಿ ಆಚರಿಸಲಾಗುವುದೆಂದು ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ತಿಳಿಸಿದರು.

ನಗರದ ತಮ್ಮ ಸ್ವ ಕಚೇರಿಯಲ್ಲಿ ಜಯಂತಿ ಆಚರಣೆ ಸಂಬಂಧ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾಡಳಿತದಿಂದ ಸೆ.21ರಂದು ಬೆಳಗ್ಗೆ 11 ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗುವುದು. ಇದಕ್ಕು ಮುನ್ನ ಬೆಳಗ್ಗೆ 8.30ಕ್ಕೆ ಸಿರಸಪ್ಪಯ್ಯ ಮಠದಿಂದ ಸಾಹಿತ್ಯ ಭವನವರೆಗೆ ಮೆರವಣಿಗೆ ಇರಲಿದೆ. ಸಂಬಂಧಿಸಿದ ಅಧಿಕಾರಿಗಳು ಶಿಷ್ಠಾಚಾರ ಪಾಲಿಸಿ. ಉಪನ್ಯಾಸ ಸೇರಿ ಇತರ ಸಿದ್ಧತೆ ಮಾಡಿಕೊಳ್ಳಿ. ಮೆರವಣಿಗೆ ಸಾಗುವ ರಸ್ತೆ ಹಾಗೂ ಸಾಹಿತ್ಯ ಭವನದಲ್ಲಿ ಸ್ವಚ್ಛತೆ ಮತ್ತು ಕುಡಿವ ನೀರಿನ ವ್ಯವಸ್ಥೆ ಮಾಡಿ. ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜು, ಹಾಸ್ಟೆಲ್‌ಗಳು, ಗ್ರಾಪಂಗಳಲ್ಲಿ ಜಯಂತಿ ಆಚರಿಸಬೇಕೆಂದು ನಿರ್ದೇಶಿಸಿದರು.

ಸಮುದಾಯ ಮುಖಂಡರಾದ ಈಶಪ್ಪ ಬಡಿಗೇರ ನರಸಾಪುರ, ದೇವಪ್ಪ ಬಡಿಗೇರ, ಶೇಖರಪ್ಪ ಬಡಿಗೇರ ಹಿರೇಸಿಂಧೋಗಿ, ರುದ್ರಪ್ಪ ಬಡಿಗೇರ, ಶರಣಕುಮಾರ ಬಡಿಗೇರ, ಈಶಪ್ಪ ಬಡಿಗೇರ, ಚಂದ್ರಶೇಖರ ಬಡಿಗೇರ, ಎ.ಪ್ರಕಾಶ ಇತರರಿದ್ದರು.