ಜಿಲ್ಲೆ

ವಿಶ್ವ ಯೋಗ ದಿನದ ದಶಮಾನೋತ್ಸವ ಯಶಸ್ಸಿಗೆ ಮನವಿ

ಚಿತ್ರದುರ್ಗ: ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಜೂ.21ರಂದು ಆಯೋಜಿಸುವ ವಿಶ್ವ ಯೋಗ ದಿನಾಚರಣೆ ದಶಮಾನೋತ್ಸವ ಯಶಸ್ಸುಗೊಳಿಸುವಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ಎಸ್. ನಾಗಸಮುದ್ರ ನಾಗರಿಕೆಗೆ ಮನವಿ ಮಾಡಿದರು.

ತಮ್ಮ ಕಚೇರಿಯಲ್ಲಿ ಸೋಮವಾರ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದಶಮಾನೋತ್ಸವದ ಅದ್ದೂರಿ ಆಚರಣೆಗೆ ತೀರ್ಮಾನಿಸಲಾಗಿದೆ. ಕಾರ್ಯಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 19ರಂದು ಬೆಳಗ್ಗೆ 7ಕ್ಕೆ ಡಿಸಿ ಕಚೇರಿಯಿಂದ ನಗರದಲ್ಲಿ ಯೋಗ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಜಿಲ್ಲಾಡಳಿತ, ಜಿಪಂ, ವಿವಿಧ ಇಲಾಖೆಗಳು ಹಾಗೂ ಮುಖ್ಯವಾಗಿ ಜಿಲ್ಲೆಯ ಯೋಗ ಸಾಧಕರ ಸಹಕಾರ ಅಗತ್ಯವಿದೆ ಎಂದರು.

ಹಿರಿಯ ವೈದ್ಯಾಧಿಕಾರಿ ಡಾ.ಟಿ. ಶಿವಕುಮಾರ್ ಮಾತನಾಡಿ, ಯೋಗ ದಿನಾಚರಣೆ ದಶಮಾನೋತ್ಸವ ಅಂಗವಾಗಿ ಈ ಬಾರಿ 10 ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ನಗರದ ವಿವಿಧ ಯೋಗ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಆಯುಷ್ ವೈದ್ಯಾಧಿಕಾರಿಗಳು ಇದ್ದರು.