ಕಲಬುರಗಿ: ನಗರದಲ್ಲಿ ೨೪್ಡ೭ ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನಕ್ಕೆ ಸಂಬAಧಿಸಿದAತೆ ವಿಶ್ವಬ್ಯಾಂಕ್ ತಂಡದ ಮುಖ್ಯ ಅಧಿಕಾರಿ ಉಪನಿತ್ ನೇತೃತ್ವದ ತಂಡ ಬುಧವಾರ ನೀರು ಶುದ್ಧೀಕರಣ ಘಟಕ, ಮೇಲು ನೀರು ಸಂಗ್ರಹಗಾರ ಘಟಕಗಳ ನಿರ್ಮಾಣ ಹಾಗೂ ಚಾಲನೆಯಲ್ಲಿರುವ ನೀರು ಶುದ್ಧೀಕರಣ ಘಟಕಗಳಲ್ಲಿ ಶುದ್ಧೀಕರಿಸುವ ವಿಧಾನ ಪರಿಶೀಲನೆ ನಡೆಸಿತು.
ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ಸಿ), ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ (ಕುಸ್ಸೆಂಪ್) ಯೋಜನೆಯಡಿ ಎಲ್ ಆ್ಯಂಡ್ ಟಿ ಕಂಪನಿ ಗುತ್ತಿಗೆ ಪಡೆದು ನಗರದಲ್ಲಿ ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸುತ್ತಿದೆ. ಆದರೆ ಪ್ರಸ್ತುತ ಈ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದ್ದಾರೆ.
ಹೀಗಾಗಿ ವಿಶ್ವಬ್ಯಾಂಕ್ ತಂಡ ಸಭೆ ನಡೆಸಿ ನಡಾವಳಿಯಲ್ಲಿ ಸೂಚಿಸಿದ ಅವಧಿಯಲ್ಲಿ ಎಲ್ಲ ಕಾಮಗಾರಿ ಮುಗಿಸಬೇಕು ಎಂದು ಕಂಪನಿ ಮುಖ್ಯಾಧಿಕಾರಿಗಳಿಗೆ ಆದೇಶಿಸಿತು. ಕೆಯುಐಡಿಎಫ್‌ಸಿ ಅಧೀಕ್ಷಕ ಅಭಿಯಂತರ ಕೆ.ಕಾಂತರಾಜ, ಸ್ಮೇಕ್ ಸಂಸ್ಥೆ ತಂಡದ ನಾಯಕ ಶಿವಶರಣಪ್ಪ ರಾಯಕೋಟಿ, ಎಲ್ ಆ್ಯಂಡ್ ಟಿ ಕಂಪನಿ ಪ್ರಧಾನ ವ್ಯವಸ್ಥಾಪಕ ಸಂಜಯಕುಮಾರ, ನೆರವು ಸಂಸ್ಥೆ ತಂಡದ ನಾಯಕ ಡಾ.ಜೈಭೀಮ ದರ್ಗಿ ಇತರರಿದ್ದರು.