ಜಿಲ್ಲೆ

ವಿಶ್ವ ಬಾಹ್ಯಕಾಶ ವಿಜ್ಞಾನದಲ್ಲಿ ಛಾಪು ಮೂಡಿಸಿದ ಭಾರತ

ವಿಜಯವಾಣಿ ಸುದ್ದಿಜಾಲ ಧಾರವಾಡ
ಈವರೆಗೂ ರಷ್ಯಾ, ಅಮೆರಿಕ, ಚೀನಾ ದೇಶಗಳು ಚಂದ್ರನ ಅಂಗಳವನ್ನು ಸ್ಪರ್ಶಿಸಿದ್ದು, ಅಮೆರಿಕ ಮಾನವ ಸಹಿತ ನೌಕೆ ಇಳಿಸಿತ್ತು. ಆದರೆ ಚಂದ್ರನ ದಕ್ಷಿಣ ಧ್ರುವಕ್ಕೆ ನೌಕೆಯನ್ನು ಯಶಸ್ವಿಯಾಗಿ ಇಳಿಸುವ ಮೂಲಕ ವಿಶ್ವ ಬಾಹ್ಯಕಾಶ ವಿಜ್ಞಾನದಲ್ಲಿ ಭಾರತ ತನ್ನದೇ ಆದ ಛಾಪು ಮೂಡಿಸಿದೆ ಎಂದು ಬೀರಪ್ಪ ಸಲಗಾರ ಹೇಳಿದರು.
ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3ರ ಯಶಸ್ವಿ ಲ್ಯಾಂಡ್ ಆಗಿರುವ ಹಿನ್ನೆಲೆಯಲ್ಲಿ ಬ್ರೇಕ್ ಥ್ರೋ ಸೈನ್ಸ್ ಸೊಸೈಟಿ ವತಿಯಿಂದ ನಗರದ ಬಾಸೆಲ್ ಮಿಷನ್ ಪಿಯು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಂಭ್ರಮಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿಸರ್ಗದ ನಿಯಮಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಂಡು ಪ್ರಯೋಗಿಸಿದರೆ ಇಂತಹ ಮಹತ್ವಾಕಾಂಕ್ಷಿ ಯೋಜನೆಗಳು ಹೊರಹೊಮ್ಮಲಿವೆ. ಚಂದ್ರನ ಉಗಮ, ವಾತವಾರಣ, ಖನಿಜಗಳ, ಅಧ್ಯಯನ ನಕ್ಷತ್ರಗಳ ಜೀವಿಗಳ ಉಗಮಗಳ ಸಂಶೋಧನೆಗಳ ಮೇಲೆ ಬೆಳಕು ಚೆಲ್ಲಲಿದೆ ಎಂದರು.
ಜಿಲ್ಲಾ ಸಂಚಾಲಕಿ ದೀಪಾ ಮಾತನಾಡಿದರು. ಉಪನ್ಯಾಸಕರಾದ ಡಾ. ರೀಟಾ, ಕಾಲೇಜಿನ ಪ್ರಾಂಶುಪಾಲೆ ಸಲೀನಾ, ಇತರರು ಇದ್ದರು.