ಬೆಂಗಳೂರು: ವಿಶ್ವ ಧ್ಯಾನ ದಿವಸದ ಪ್ರಯುಕ್ತ ಸಂಯಮ ಯೋಗ ಮಹಾವಿದ್ಯಾಲಯದ ವತಿಯಿಂದ ನಾಗರಬಾವಿಯ ಆತ್ಮ ಸಂಯಮ ಯೋಗ ಗುರುಕುಲದ ಆವರಣದಲ್ಲಿ ಶನಿವಾರ ಯೋಗ ಮತ್ತು ಧ್ಯಾನ ಮಾಡುವ ಮೂಲಕ ಧ್ಯಾನ ದಿನ ಆಚರಿಸಲಾಯಿತು.
ಸಂಯಮ ಸಮೂಹ ಸಂಸ್ಥೆ ಅಧ್ಯಕ್ಷ ಯೋಗಾಚಾರ್ಯ ಆತ್ಮಪ್ರೇಮ್ ಡಾ. ಧನ್ವಂತರಿ ಧ್ಯಾನ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶ್ವ ಧ್ಯಾನ ದಿನದ ಮಹತ್ವ ತಿಳಿಸುತ್ತ ಅಂತರಂಗದ ಮೌನ ಜಾಗತಿಕ ಸಾಮರಸ್ಯಕ್ಕೆ ದಾರಿ ಮಾಡಿಕೊಡಲಿದೆ ಎಂದ ಅವರು, ಅಷ್ಟಾಂಗ ಯೋಗದ ಏಳನೆಯ ಮೆಟ್ಟಿಲಾದ ಧ್ಯಾನ ಸಾಧನೆ ಹಾಗೂ ಸಂಯಮ ಆತ್ಮಸಾಕ್ಷಾತ್ಕಾರ ಸಾಧನೆಯ ತಂತ್ರಗಳ ಪ್ರಾಯೋಗಿಕ ಅಭ್ಯಾಸ ತರಬೇತಿ ನೀಡಿದರು. ಮಾನಸಿಕ ಆರೋಗ್ಯಕ್ಕೆ ಧ್ಯಾನದ ಉಪಯೋಗಗಳ ಕುರಿತು ವಿವರಿಸಿದರು.
ಸಂಸ್ಥೆ ನಿರ್ದೇಶಕಿ ಸುಮತಾರಾಣಿ, ಕಾರ್ಯದರ್ಶಿ ಚಕ್ರವರ್ತಿ, ವೈದ್ಯಕೀಯ ನಿರ್ದೇಶಕ ಡಾ. ಉತ್ತುಂಗ ಒಡೆಯರ್, ಸಂಯಮ ಯೋಗ ಮಹಾವಿದ್ಯಾಲಯದ 70ಕ್ಕೂ ಹೆಚ್ಚು ಯೋಗ ಸಾಧಕರು ಭಾಗವಹಿಸಿದ್ದರು.