ಜಿಲ್ಲೆ

ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭೋಷಿಯ

ಅರಕಲಗೂಡು ತಾಲೂಕಿನ ಕೊಳ್ಳಂಗಿ ಗ್ರಾಮದ ಕುಬ್ಜ ಕ್ರೀಡಾಪಟು ಕೆ.ಆರ್.ಶಾಂತಕುಮಾರ್ ಭೋಷಿಯ ಕ್ರೀಡೆಯಲ್ಲಿ ಗೆದ್ದು ಕಂಚಿನ ಪದಕ ಪ್ರದರ್ಶಿಸುತ್ತಿರುವುದು.

ಅರಕಲಗೂಡು: ಜರ್ಮನಿಯಲ್ಲಿ ನಡೆಯುತ್ತಿರುವ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಅರಕಲಗೂಡು ತಾಲೂಕಿನ ಕೊಳ್ಳಂಗಿ ಗ್ರಾಮದ ಕುಬ್ಜ ಕ್ರೀಡಾಪಟು ಕೆ.ಆರ್.ಶಾಂತಕುಮಾರ್ ಭೋಷಿಯ ಕ್ರೀಡೆಯಲ್ಲಿ ಗೆದ್ದು ಕಂಚಿನ ಪದಕ ಗಳಿಸಿದ್ದಾರೆ.
ಎಲ್ಲರ ಸಹಕಾರದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾಗಿದ್ದು, ಈ ಪದಕವನ್ನು ಭಾರತಾಂಬೆಗೆ ಅರ್ಪಿಸಿದ್ದೇನೆ. ಜರ್ಮನಿಯಿಂದ ವಾಪಸಾಗಲು ಹಣದ ಕೊರತೆ ಉದ್ಭವಿಸಿದ್ದು ಸಹಾಯ ಮಾಡಬೇಕೆಂದು ಶಾಂತಕುಮಾರ್ ಮನವಿ ಮಾಡಿದ್ದಾರೆ.