ಜಿಲ್ಲೆ

ವಿಶ್ವ ಆಟಿಸಂ ಕುರಿತು ಜಾಗೃತಿ ಇರಲಿ

ಕಾಗವಾಡ: ಮಿರಜ ಪಟ್ಟಣದಲ್ಲಿ ವಿಶ್ವ ಆಟಿಸಂ ಜಾಗೃತಿ ದಿನದ ಅಂಗವಾಗಿ ನಿರ್ಮಲ್ ಆಟಿಸಂ ಮತ್ತು ಕಲಿಕಾ ವಿಕಲಚೇತನ ಶಿಕ್ಷಣ ಕೇಂದ್ರದ ವತಿಯಿಂದ ಬುಧವಾರ ಮಿರಜ ತಾಲೂಕಿನ ಧಾಮಣೆ ಗ್ರಾಮದ ಜಿಲ್ಲಾ ಪರಿಷತ್ ಶಾಲೆ ನಂ.೨ರಲ್ಲಿ ಮಾರ್ಗದರ್ಶನ ಕಾರ್ಯಕ್ರಮ ಜರುಗಿತು.

ನಿರ್ಮಲ್ ಆಟಿಸಂ ಮತ್ತು ಕಲಿಕಾ ವಿಕಲಚೇತನ ಶಿಕ್ಷಣ ಕೇಂದ್ರದ ಸಂಸ್ಥಾಪಕ ಡಾ.ಚಂದ್ರಶೇಖರ ಹಳಿಂಗಳೆ ಮತ್ತು ಸಹಸಂಸ್ಥಾಪಕಿ ಡಾ.ನಿಶಾ ಹಳಿಂಗಳೆ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಜ್ಞರು ಸ್ವಲೀನತೆಯ ಲಕ್ಷಣಗಳು, ರೋಗನಿರ್ಣಯ, ನಿರ್ವಹಣೆ ಮತ್ತು ವಿಶೇಷ ಮಕ್ಕಳಿಗೆ ಪರಿಣಾಮಕಾರಿ ಬೋಧನಾ ವಿಧಾನಗಳ ಕುರಿತು ತಿಳಿಸಿದರು.

ಆಟಿಸಂ ಎಂದರೇನು? ಅದರ ಪ್ರಾಥಮಿಕ ಲಕ್ಷಣಗಳು, ಚಿಕಿತ್ಸಾ ವಿಧಾನಗಳು ಮತ್ತು ವಿಶೇಷ ಮಕ್ಕಳಿಗೆ ಸೂಕ್ತವಾದ ಶೈಕ್ಷಣಿಕ ವಿಧಾನಗಳ ಬಗ್ಗೆ ಪ್ರಾಂಶುಪಾಲೆ ಡಾ.ಮಾಧುರಿ ವಾಂಗಪತಿ ತಿಳಿಸಿದರು.

ಉಪಪ್ರಾಂಶುಪಾಲ ಸಚಿನ ಪಾಟೀಲ ಮಾತನಾಡಿ, ಸ್ವಲೀನತೆ ಹೊಂದಿರುವ ಮಕ್ಕಳ ಸಾಮಾಜಿಕ ಮತ್ತು ಶೈಕ್ಷಣಿಕ ಜೀವನ ಸುಧಾರಿಸಲು ಅಗತ್ಯ ಕ್ರಮಗಳ ಮಾರ್ಗದರ್ಶನ ಮಾಡಿದರು.

ಡಾ.ಮೀನಾ ಪಾಂಡೆ, ಆನಂದರಾವ ಗಾಯಕವಾಡ, ಸುಪ್ರಿಯಾ ಚೋಪಡೆ, ಪ್ರೀತಿ ಶಿಂಧೆ, ಪ್ರಾಂಶುಪಾಲ ಸುನಿಲ ಸತ್ತೆಣ್ಣ ಇತರರಿದ್ದರು.