ಬಾಗಲಕೋಟೆ: ನಗರದ ನವ ಭಾರತ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸ್ವಾತಂತ್ರ‍್ಯೋತ್ಸವ ಅಂಗವಾಗಿ ಸಂಸ್ಥೆಯ ಅಧ್ಯಕ್ಷೆ ಎನ್.ಎಚ್.ಕೇಸನೂರ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿನ ರೋಗಿಗಳಿಗೆ, ವಿದ್ಯಾಗಿರಿಯಲ್ಲಿರುವ ಸೇವಾ ಭಾರತಿ ಆಶ್ರಮದ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿ ವಿಭಿನ್ನಾಗಿ ಸ್ವಾತಂತ್ರ‍್ಯೋತ್ಸವ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಜಿ.ಎಂ.ನದಾಫ, ಕಾರ್ಯದರ್ಶಿ ಎಂ.ಎಚ್.ಮುದ್ದೇಬಿಹಾಳ, ಆರ್.ಎಂ.ಇಟಗಿ, ಕೆ.ಎನ್.ಆಫಘಾನ್, ಆರ್.ಬಿ.ಕುಲಕರ್ಣಿ, ಎಸ್.ಎನ್.ಸೌದಾಗರ ಇದ್ದರು.