ಕೊಳ್ಳೇಗಾಲ: 2024-25ನೇ ಸಾಲಿನ ರಾಷ್ಟ್ರೀಯ ಪ್ರತಿಭಾ ಸಂಶೋಧನಾ ಹಾಗೂ ವಿದ್ಯಾರ್ಥಿ ವೇತನ ( ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಶಿಪ್) ಪರೀಕ್ಷೆಯಲ್ಲಿ ಕೊಳ್ಳೇಗಾಲ ಬ್ಲಾಕ್‌ನ ವಿವಿಧ ಸರ್ಕಾರಿ ಶಾಲೆಯ 29 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ವಿಶೇಷ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿದ್ದಾರೆ.
ತಾಲೂಕಿನ ಹೊಸ ಮಾಲಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಯಶಸ್ವಿನಿ, ಇಕ್ಕಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೋಕ್ಷ, ಎಸ್. ಶಶಾಂಕ್ ಬಾಬು, ಸತ್ತೇಗಾಲ ಪ್ರೌಢಶಾಲೆಯ ಎಂ.ಪಟೇಲ, ಬಾಪುನಗರ ಟೌನ್ ಪ್ರೌಢಶಾಲೆಯ ಯೋಗೇಶ್, ಎಸ್‌ವಿಕೆ ಪ್ರೌಢಶಾಲೆಯ ಬಿಬಿ ಜಾಯ್ನಿಬ್, ಮುಡಿಗುಂಡ ಆದರ್ಶ ವಿದ್ಯಾಲಯದ ಎಸ್.ಸಹನಾ, ಎ.ಐಶ್ವರ್ಯಾ, ಪಿ. ಅಕ್ಷಯ, ಎಸ್.ಅಶ್ವಿನ್‌ಗೌಡ, ಎಸ್.ಬೆನಕಪ್ರಸಾದ್, ಜೆ.ಬೃಂದಶ್ರೀ, ದೃವಂತಾ, ಎಂ.ದಿವ್ಯಾ, ಕರಣ್ ಆದಿತ್ಯ, ಬಿ.ಎಸ್.ಕೇಶವರಾವ್ , ಎಸ್.ಕುಮುದಾ, ಪಿ.ಎಸ್.ಮನಸ್ವಿ, ಜಿ.ಮನೋಜ್, ಮಹಮ್ಮದ್ ಆರಮ್, ಎನ್.ನಾಗಪ್ರಜ್ವಲ್, ಎಂ.ನಮ್ರತಾ, ಡಿ.ಪ್ರಫುಲ ವಂದನ, ಎಂ.ಪುನೀತ್, ಎಸ್.ರೋಷನ್ ಶರ್ಮ, ಎನ್.ಸಂಜಯ್, ಎನ್.ತೇಜಸ್ ಮೂರ್ತಿ, ತೋಶನಿ ರತೀಶ್, ಪಿ.ವಿನುತಾ ವಿಶೇಷ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾದ ವಿದ್ಯಾರ್ಥಿಗಳು.
ಈ ವಿದ್ಯಾರ್ಥಿಗಳು ಕಳೆದ ವರ್ಷ ಪರೀಕ್ಷೆ ಬರೆದಿದ್ದರು. ಅಂತೆಯೇ ಜೂ.13ರಂದು ಫಲಿತಾಂಶ ಹೊರಬಿದ್ದಿದೆ. ಕೊಳ್ಳೇಗಾಲ ಬ್ಲಾಕ್ ನಿಂದ ಒಟ್ಟು 29 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಶೇಷವೇನೆಂದರೆ ಆದರ್ಶ ವಿದ್ಯಾಲಯದ 22 ವಿದ್ಯಾರ್ಥಿಗಳು ತೇಗರ್ಡೆ ಹೊಂದಿದ್ದಾರೆ. 8ನೇ ತರಗತಿ ನಂತರ ಆರ್ಥಿಕ ನಿಬಂಧನೆಗಳಿಂದ ತಮ್ಮ ಶಿಕ್ಷಣವನ್ನು ನಿಲ್ಲಿಸಲು ಮುಂದಾಗುವ ವಿದ್ಯಾರ್ಥಿಗಳ ತೊಂದರೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆ ಇದಾಗಿದೆ. 8ನೇ ತರಗತಿ ನಂತರದ 9 ರಿಂದ 12 ನೇ ತರಗತಿವರೆಗಿನ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗೆ ಪ್ರತಿ ವರ್ಷ 12 ಸಾವಿರ ರೂ. ವಿದ್ಯಾರ್ಥಿ ವೇತನ ದೊರೆಯಲಿದೆ. ಪರೀಕ್ಷೆಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.