ಜಿಲ್ಲೆ

ವಿಶೇಷ ಪ್ಯಾಕೇಜ್ ಕೊಡಿ; ಶಾಸಕ ದೇವಾನಂದ ಚವಾಣ್

ವಿಜಯಪುರ: ಭೀಮಾತೀರದ ಚಡಚಣ ತಾಲೂಕನ್ನು ನೆರೆ ಪೀಡಿತ ತಾಲೂಕು ಎಂದು ಘೋಷಿಸಿ ವಿಶೇಷ ಪ್ಯಾಕೇಜ್ ನೀಡಲು ಶಾಸಕ ದೇವಾನಂದ ಚವಾಣ್ ಆಗ್ರಹಿಸಿದರು.

ನೆರೆಯಿಂದ ತೀವ್ರವಾಗಿ ಹಾನಿಗೀಡಾದ ಚಡಚಣ ತಾಲೂಕನ್ನು ರಾಜ್ಯ ಸರ್ಕಾರ ನೆರೆ ಪೀಡಿತ ತಾಲೂಕುಗಳ ಪಟ್ಟಿಯಿಂದ ಕೈ ಬಿಟ್ಟಿರುವುದು ಖೇದಕರ. ಇದರಿಂದ ಈ ಭಾಗದ ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಬುಧವಾರ ಸುದ್ದಿಗೋಷ್ಟಿಯಲ್ಲಿ ಅವರು ಆರೋಪಿಸಿದರು.

ಚಡಚಣ ತಾಲೂಕಿನ 19 ಹಳ್ಳಿಗಳಲ್ಲಿ ಅಪಾರ ಹಾನಿಯಾಗಿದೆ. ಸಾರ್ವಜನಿಕ ಆಸ್ತಿ- ಪಾಸ್ತಿ, ಮನೆಗಳು, ಬೆಳೆಗಳು ಹಾಳಾಗಿವೆ. ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಇಂಥ ಪರಿಸ್ಥಿತಿಯಲ್ಲಿ ನೆರವಿಗೆ ಮುಂದಾಗಬೇಕಾದ ಸರ್ಕಾರವೇ ತಾರತಮ್ಯ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಸರ್ಕಾರ ಕೂಡಲೇ ಈ ಅನ್ಯಾಯ ಸರಿಪಡಿಸಬೇಕು ಎಂದರು.