ನಾಪೋಕ್ಲು: ನೆಲಜಿ ಗ್ರಾಮದ ಅಂಬಲ ಮಹಿಳಾ ಸಮಾಜದ ವತಿಯಿಂದ ಕಕ್ಕಡ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಂಬಲ ಮಹಿಳಾ ಸಮಾಜದ ಅಧ್ಯಕ್ಷೆ ಅಪ್ಪು ಮಣಿಯಂಡ ಡೇಝಿ ಸೋಮಣ್ಣ ಹೇಳಿದರು.
ಆಗಸ್ಟ್ 12 ರಂದು ಬೆಳಗ್ಗೆ 11.30 ಗಂಟೆಗೆ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ಕಕ್ಕಡ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ ನೆಲಜಿ ದವಸ ಭಂಡಾರದ ಕಟ್ಟಡದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಗ್ರಾಮದ ಕಾಫಿ ಬೆಳೆಗಾರ ಮಂಡೀರ ಸರೋಜಾ ದೇವಯ್ಯ ಹಾಗೂ ವಿರಾಜಪೇಟೆಯ ವುಮೆನ್ಸ್ ವಿಂಗ್ ಅಧ್ಯಕ್ಷೆ ಮನೆಯಪಂಡ ಶಾಂತಿ ಸತೀಶ್ ಪಾಲ್ಗೊಳ್ಳಲಿದ್ದಾರೆ ಡೇಝಿ ಸೋಮಣ್ಣ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ,ಪದ್ಮಶ್ರಿ ಪ್ರಶಸ್ತಿ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಹಾಗೂ ಮಡಿಕೇರಿ ಆಕಾಶ ವಾಣಿಯ ನಿವೃತ್ತ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸಲಹಾ ಸಮಿತಿ ಅಧ್ಯಕ್ಷೆ ಮಣವಟ್ಟೀರ ಕಮಲಾ ಬೆಳ್ಳಿಯಪ್ಪ, ನಿರ್ದೇಶಕರಾದ ಮಣವಟ್ಟೀರ ಸುಶೀಲಾ ಚಂಗಪ್ಪ , ಮಣವಟ್ಟೀರ ಜಾನ್ಸಿ ತಿಮ್ಮಯ್ಯಇದ್ದರು.