ಹಾಸನ : ಸಮಾಜದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಹಾಗೂ ಹೆಚ್ಚು ಕಾಳಜಿಗೆ ಪಾತ್ರರಾಗದ ವಿವಿಧ ರೀತಿಯ ಮಾನಸಿಕ ನೂನ್ಯತೆ ಹಾಗೂ ದೈಹಿಕ ಅಂಗ ವೈಫಲ್ಯಕ್ಕೆ ಒಳಗಾಗಿರುವ ಅಂಗವಿಕಲ ಹಿರಿಯರು ಮತ್ತು ಮಕ್ಕಳನ್ನು ನಮ್ಮಂತೆ ನಾಗರೀಕರು ಎಂದು ಭಾವಿಸಿ ಅವರ ಭಾವನೆಗಳಿಗೆ ಸ್ಪಂಧಿಸಿ ಪ್ರೋತ್ಸಾಹ ನೀಡಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಹಮ್ಮಿಗೆ ಮೋಹನ್ ಹೇಳಿದರು.
ನಗರದ ಸಾಲಗಾಮೆ ರಸ್ತೆಯಲ್ಲಿರುವ ಸಂಸ್ಕೃತ ಭವನದಲ್ಲಿ ಬುಧವಾರ ಅನನ್ಯ ಟ್ರಸ್ಟ್ ವತಿಯಿಂದ ವಿಶ್ವ ಅಂಗವಿಕಲರ ದಿನಾಚರಣೆಯ ಅಂಗವಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತಿರ್ಣರಾದ ವಿಶೇಷ ಚೇತನ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಕಲಚೇತನರನ್ನು ಹಲವಾರು ಕಾರ್ಯಗಳಲ್ಲಿ ತೊಡಗಿಸಿಕೊಳ್ಳವಂತೆ ಮಾಡಿ ಅವರ ನೂನ್ಯತೆಗಳನ್ನು ಮರೆಯುವಂತೆ ಮಾಡಬೇಕು ಅದಕ್ಕೆ ಅವರ ಪೋಷಕರೊಂದಿಗೆ ಸಮಾಜ ಭಾಂದವರು ಸ್ಪಂದಿಸುವುದು ಬಹಳ ಮುಖ್ಯ ಎಂದು ಕಿವಿಮಾತು ಹೇಳಿದರು.
ಅಂಗವಿಕಲ ಮಕ್ಕಳನ್ನು ಸಾಕುವ ಪೋಷಕರಿಗೆ ಅವರನ್ನು ಪೋಷಿಸುವುದು ಸವಾಲಾಗಿದ್ದು ಅದನ್ನು ನಿಭಾಹಿಸುತ್ತಿರುವ ಪೋಷಕರಿಗೆ ಧನ ್ಯವಾದ ತಿಳಿಸಿದ ಅವರು ಅವರ ಪೋಷಣೆಗೆ ಬೇಕಾದ ಸಹಾಯವನ್ನು ಅನನ್ಯ ಟ್ರಸ್ಟ್ ಹಾಗೂ ರೆಡ್‌ಕ್ರಾಸ್ ಸಂಸ್ಥೆ ಮಾಡುತ್ತದೆ ಎಂದು ಭರವಸೆ ನೀಡಿದರು.
ಅನನ್ಯ ಟ್ರಸ್ಟ್‌ನ ನಿರ್ದೇಶಕಿ ರಂಗಲಕ್ಷ್ಮೀ ಪ್ರಾಸ್ಥಾವಿಕ ನುಡಿಗಳನ್ನಾಡಿ, ಅನನ್ಯ ಟ್ರಸ್ಟ್ ಈಗಾಗಲೇ ಇಂತಹ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ ಇಂತಹ ವಿಶೇಷ ಚೇತನ ಮಕ್ಕಳನ್ನು ಪ್ರೋತ್ಸಹಿಸಲು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ,ಇನ್ನು ಹೆಚ್ಚಿನ ಸಹಕಾರಿ ಕೆಲಸಗಳನ್ನು ನಿರ್ವಹಿಸಲಾಗುವುದು ಎಂದು ಭರವಸೆಯ ಮಾತುಗಳನ್ನಾಡಿದರು.
ಈ ವೇಳೆ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಿರ್ಣರಾದ 35 ವಿಕಲ ಚೇತನ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಡಾ. ಎ.ಸಾವಿತ್ರಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಕೆ.ಎಂ.ಮಂಜುನಾಥ್, ರೆಡ್ ಕ್ರಾಸ್ ಕಾರ್ಯದರ್ಶಿ ಶಬೀರ್ ಅಹಮ್ಮದ್, ಟ್ರಸ್ಟ್‌ನ ಅಧ್ಯಕ್ಷೆ ಕೆ.ಟಿ ಜಯಶ್ರೀ, ಸದಸ್ಯರುಗಳಾದ ನಿರ್ಮಲಾ, ಸುಮನಾ ಜಯಪ್ರಕಾಶ್ ಸ್ಕೌಟ್ ಅ್ಯಂಡ್ ಗೈಡ್ಸ್‌ನ ಹಿರಿಯರಾದ ಕಾಂಚನಮಾಲ, ಸುನಂದಾ ಕೃಷ್ಣ, ಇತರರು ಇದ್ದರು.