ಜಿಲ್ಲೆ

ವಿಶೇಷ ಗ್ರಾಮಸಭೆ ವೀಕ್ಷಿಸಿದ ಪ್ರಧಾನಿ

ವಿಜಯಪುರ: ಗ್ರಾಮ ಸ್ವರಾಜ್ಯದ ಬಗ್ಗೆ ಮಹಾತ್ಮಾ ಗಾಂಧೀಜಿ ಕಂಡಿದ್ದ ಕನಸು ಇದೀಗ ನನಸಾಗುವ ಕಾಲ ಬಂದಿದೆ. ಮಹಾತ್ಮಾ ಗಾಂಧಿ‌ ಜಯಂತಿ ಆಚರಣೆ ಹಿನ್ನಲೆ ದೇಶದಲ್ಲಿ ವಿಶೇಷ ಗ್ರಾಮ‌ ಸಭೆ ಆಯೋಜನೆ ಮಾಡಲಾಗಿದೆ. ಅದರಂತೆ ವಿಶೇಷ ಗ್ರಾಮ ಸಭೆ ವೀಕ್ಷಿಸಿದ್ರು ಪ್ರಧಾನಿ ಮೋದಿ. ಕರ್ನಾಟಕದ ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ವರಕನಹಳ್ಳಿಯ ಗ್ರಾಮ ಸಭೆ ಆಯ್ಕೆಯಾಗಿತ್ತು. ಕೋರವಾರ ಗ್ರಾಮದ ಆಂಜನೇಯ ದೇವಸ್ಥಾನದ ಸಭಾ ಭವನದಲ್ಲಿ ಆಯೋಜನೆಯಾಗಿರೋ ಸಭೆ. ಈಗಾಗಲೇ ಆರಂಭವಾದ ಸಭೆ, ಸಭೆಯಲ್ಲಿ ಗ್ರಾಮ‌ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಸರ್ಕಾರಿ ಶಾಲಾ ಶಿಕ್ಷಕರು ಗ್ರಾಮಸ್ಥರು ಭಾಗಿಯಾಗಿದ್ದಾರೆ. ಪ್ರೊಜೆಕ್ಟರ್ ಮೂಲಕ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ವೀಕ್ಷಣೆ. ಲೈವ್ ಮೂಲಕ ವರಕನಹಳ್ಳಿಯ ಗ್ರಾಮ ಸಭೆಯನ್ನು ವೀಕ್ಷಣೆ ಮಾಡಿದ್ರು ಪ್ರಧಾನಿ ಮೋದಿ. ಸ್ಚತಃ ಪ್ರಧಾನಿ ಮೋದಿ ನಮ್ಮೂರ ಗ್ರಾಮ ಸಭೆ ವೀಕ್ಷಣೆ ಮಾಡಲಿದ್ದಾರೆ ಎಂಬ ಸಂತಸದಲ್ಲಿ ಜನಿದ್ದಾರೆ. ಹಳ್ಳಿಗಳ ಅಭಿವೃದ್ಧಿ ಬಗ್ಗೆ ಕನಸು ಕಂಡಿದ್ದ ಮಹಾತ್ಮರ ಕನಸು ಇದೀಗ ಇಡೇರಲಿದೆ.