ಚಿತ್ರದುರ್ಗ: ಹೊಸದುರ್ಗ ತಾಲೂಕು ಹಳೇಕುಂದೂರು ಗ್ರಾಮದ ಇ.ವಿಶಾಲಾ, ಜೀವರಸಾಯನ ಶಾಸ್ತ್ರದಲ್ಲಿ ಮಂಡಿಸಿದ ಪ್ರಬಂಧಕ್ಕಾಗಿ ದಾವಣಗೆರೆ ವಿವಿಯಿಂದ ಪಿಎಚ್.ಡಿ ಲಭಿಸಿದೆ. ವಿವಿಯ ಆಹಾರ ತಂತ್ರಜ್ಞಾನ ವಿಭಾಗದ ಪ್ರೊ.ವಡ್ಲಪುಡಿ ಕುಮಾರ್ ಹಾಗೂ ಡಾ.ಪೂರ್ಣಿಮಾ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ದಾವಣಗೆರೆ ವಿವಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. ವಿಶಾಲಾ ಅವರು ನಿವೃತ್ತ ಶಿಕ್ಷಕ ಕೆ.ಈಶ್ವರಪ್ಪ-ಮಹೇಶ್ವರಮ್ಮ ಅವರ ಪುತ್ರಿ.