ಜಿಲ್ಲೆ

ವಿಶಾಲ ಸೌಹಾರ್ದ ಸಂಘದ 4ನೇ ಶಾಖೆ ಉದ್ಘಾಟನೆ

ಬಾಗಲಕೋಟೆ :ನವನಗರದಲ್ಲಿ ವಿಶಾಲ (ಎಂಆರ್‌ಎನ್) ಸೌಹಾರ್ದ ಪತ್ತಿನ ಸಹಕಾರಿ ಸಂಘದ 4ನೇ ಶಾಖೆ ಉದ್ಘಾಟನೆ ಕಾರ್ಯಕ್ರಮ ರವಿವಾರ ಜರುಗಿತು.

ಮಾಜಿ ಸಚಿವ, ಎಂಆರ್‌ಎನ್ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ|ಮುರುಗೇಶ ನಿರಾಣಿ ಮಾತನಾಡಿ, ರೈತರಿಗೆ ಆರ್ಥಿಕ ಚೈತನ್ಯ ತುಂಬುವ ಜತೆಗೆ ಅವರ ಬೆನ್ನೆಲುಬಾಗಿ ನಿಲ್ಲಬೇಕು ಎಂಬುದು ನಮ್ಮ ಆಶಯ. 500 ಮೆಟ್ರಿಕ್ ಟನ್ ಕಬ್ಬು ನುರಿಸುವ ಕಾರ್ಖಾನೆಯೊಂದಿಗೆ ಆರಂಭಗೊAಡ ಎಂಆರ್‌ಎನ್ ಸಮೂಹ, ಇಂದು 21 ಕಾರ್ಖಾನೆ, 72 ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಡಿಸ್ಟಲರಿ ಉತ್ಪಾದನೆಯಲ್ಲಿ ಸಧ್ಯ ದೇಶಕ್ಕೆ ನಂಬರ್ 1 ಸ್ಥಾನದಲ್ಲಿದೆ ಎಂದರು.

ವಿಧಾನಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಪಿ.ಎಚ್. ಪೂಜಾರ, ಮಾಜಿ ಶಾಸಕ ನಾರಾಯಣಸಾ ಬಾಂಡಗೆ ಮುಂತಾದವರು ಮಾತನಾಡಿದರು.
ಟೆಂಗಿನಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಮಳಿಯಪ್ಪಯ್ಯನ ಮಠದ ಶ್ರೀ ಭಾಸ್ಕರಸ್ವಾಮಿ ಮಹಾಪುರುಷ ಸಾನಿಧ್ಯ ವಹಿಸಿದ್ದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಅವರು ವಿಶಾಲ ಸೌಹಾರ್ದ ಸಹಕಾರಿ ಸಂಘದ 4ನೇ ಶಾಖೆಗೆ ಚಾಲನೆ ನೀಡಿದರು. ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರು ಲಾಕರ್ ಸೇವೆ ಉದ್ಘಾಟಿಸಿದರು. ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಜಿ.ಎನ್. ಪಾಟೀಲ ಗಣಕಯಂತ್ರಗಳಿಗೆ ಚಾಲನೆ ನೀಡಿದರು.

ಜಿ.ಪಂ. ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ, ಜೆ.ಬಿ. ಬೂದಿಹಾಳ, ಡಾ.ಸತೀಶ ಬಿರಾದಾರ, ಬಿಟಿಡಿಎ ಮಾಜಿ ಸದಸ್ಯರಾದ ಸಂತೋಷ ಹೊಕ್ರಾಣಿ, ಕುಮಾರ ಯಳ್ಳಿಗುತ್ತಿ, ನಗರಸಭೆ ಸದಸ್ಯರಾದ ಜ್ಯೋತಿ ಭಜಂತ್ರಿ, ಸವಿತಾ ಲೆಂಕೆನ್ನವರ, ಪ್ರಮುಖರಾದ ರವಿ ಪಟ್ಟಣದ, ಲಕ್ಷಿ÷್ಮನಾರಾಯಣ ಕಾಸಟ, ಕೃಷ್ಣಾ ನಾಡಗೌಡ, ಆರ್.ಆರ್. ನಾಯಕ ಮುಂತಾದವರು ಉಪಸ್ಥಿತರಿದ್ದರು.