ಬಸವಕಲ್ಯಾಣ: ದೇಶದ ಯುವ ಸಮೂಹಕ್ಕೆ ಸ್ಪೂರ್ತಿ ತುಂಬಿದ ಸ್ವಾಮಿ ವಿವೇಕಾನಂದರು ಶ್ರೇಷ್ಠ ವ್ಯಕ್ತಿತ್ವದ ಮಹಾ ಚೇತನ್ ಎಂದು ಎಸ್‌ಎಸ್‌ಕೆಬಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ವಿಠೋಬಾ ದೊಣ್ಣೇಗೌಡರ ಹೇಳಿದರು.
ನಗರದ ಎಸ್‌ಎಸ್‌ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ, ಎಂದು ಯುವಕರನ್ನು ಎಚ್ಚರಿಸಿದ ವಿವೇಕಾನಂದರು ಯುವಕರ ಕಣ್ಮಣಿಯಾಗಿದ್ದರು ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಕಲ್ಯಾಣಪ್ಪ ನಾವದಗಿ ವಿಶೇಷ ಉಪನ್ಯಾಸ ನೀಡಿ, ಸ್ವಾಮಿ ವಿವೇಕಾನಂದರ ಸಾಧನೆ ಅಪ್ರತಿಮವಾದದ್ದು, ವಿಶ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಮಾಡಿದ ಭಾಷಣ ಶ್ರೇಷ್ಠವಾದದ್ದು ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಸುರೇಶ್ ಎಚ್.ಆರ್. ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ, ಸಂದೇಶ ಯುವ ಸಮೂಹಕ್ಕೆ ಸದಾ ಸ್ಫೂರ್ತಿದಾಯಕ ಎಂದರು.
ಗ್ರಂಥಪಾಲಕ ಸೂರ್ಯಕಾಂತ ನಾಸೆ, ಶಿವಾನಂದ ಬಿರಾದಾರ್, ಇಂದ್ರಜಿತ್ ರೆಡ್ಡಿ, ಶಿವಕುಮಾರ ಕೊಲ್ಲೆ, ದೀಪಕ್ ಕಾಡದಿ, ಶರಣು ಮಠಪತಿ, ವೈಶಾಲಿ ಎಚ್., ಭಾರತಿ ಮಠ, ಜ್ಯೋತಿ ಪಾಟೀಲ್, ಶಿಲ್ಪಾ ಬಿರಾದಾರ, ರಂಜಿತಾ, ಪ್ರಿಯಾಂಕಾ, ಜ್ಯೋತಿ, ವಾಣಿಶ್ರೀ, ಸೌಮ್ಯ ಜೋಶಿ ಇತರರಿದ್ದರು.