ಜಿಲ್ಲೆ

ವಿವೇಕಾನಂದರ ಆದರ್ಶ ಬೆಳೆಸಿಕೊಳ್ಳಿ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಇಲ್ಲಿನ ಕಾಳಿದಾಸ ಶಿಕ್ಷಣ ಸಂಸ್ಥೆಯ ಎಂ.ಎಚ್.ಯಮನಾಳ ಕಲಾ ಹಾಗೂ ಜಿ.ಶಂಕರಗೌಡ ಮತ್ತು ಜಿ.ಸರೋಜಮ್ಮ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ೧೬೦ ನೇ ಜಯಂತಿ ಈಚೆಗೆ ಜರುಗಿತು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಶಾಂತಾ ಮುದಿಗೌಡರ ಮಾತನಾಡಿ, ರಾಷ್ಟ ನಿರ್ಮಾಣದಲ್ಲಿ ಯುವಕರು ಮೂಡನಂಬಿಕೆ, ಜಾತಿ, ಮತ, ಪ್ರಾದೇಶಿಕತೆಯಿಂದ ಹೊರಬಂದು ಮಹತ್ವಾಕಾಂಕ್ಷೆ ಬೆಳಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಎಸ್.ಎಂ.ಹಡಪದ ಮಾತನಾಡಿ, ವಿವೇಕಾನಂದರ ಆದರ್ಶ ವಿಚಾರಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಬಿ.ಕುರುಬರ ಮಾತನಾಡಿ, ವಿವೇಕಾನಂದರ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳಾದ ತೇಜಸ್ವಿನಿ ಬಡಿಗೇರ, ಯೋಗಿತಾ ಭಾಟ, ಕಾವೇರಿ ಬಾಬನಿ ವಿವೇಕಾನಂದರ ಕುರಿತು ಭಾಷಣ ಮಾಡಿದರು.ಪ್ರಾಚಾರ್ಯ ಡಾ.ಎಂ.ಎಸ್.ಮುಂಡಗನೂರ, ಕನ್ನಡ ಉಪನ್ಯಾಸಕಿ ಭುವನೇಶ್ವರಿ ಟೋಂಗಳೆ, ಉಪನ್ಯಾಸಕ ಎ.ಎ.ಗುಡಿ, ಶಿಕ್ಷಕಿ ಎಚ್.ಪಿ.ಎಸ್ ಹಿರೇಸಂಶಿ ಉಪಸ್ಥಿತರಿದ್ದರು. ಭಾಗ್ಯಶ್ರೀ ಮಾಗಿ ಪ್ರಾರ್ಥಿಸಿದರು, ಕಾರ್ತಿಕ ಮಾಲಿಪಾಟೀಲ್ ವಂದಿಸಿದರು, ಸಂಜೀವ ಹರವಿ ನಿರೂಪಿಸಿದರು.