ಜಿಲ್ಲೆ

ವಿವೇಕಾನಂದ ಸೇವಾ ಸಂಸ್ಥೆ ಕೊಡುಗೆ

ಗೋಣಿಕೊಪ್ಪ: ಸಮೀಪದ ಬಾಳೆಲೆಯಲ್ಲಿ ವಿಜಯಲಕ್ಷ್ಮೀ ಸಂಯುಕ್ತ ಪದವಿ ಪೂರ್ವ ಕಾಲೇಜನ್ನು ವಿವೇಕಾನಂದ ಸೇವಾ ಸಂಸ್ಥೆಯಿಂದ 20 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಶನಿವಾರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಲೈಬ್ರರಿ, ಕಂಪ್ಯೂಟರ್ ಕೊಠಡಿ, ಶೌಚಗೃಹ ಮತ್ತು ತರಗತಿಗಳನ್ನು ವ್ಯವಸ್ಥಿತವಾಗಿ ನವಿಕರೀಕಸಲಾಗಿದ್ದು, ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.
ವಿವೇಕಾನಂದ ಸೇವಾ ಸಮಿತಿಯ ಡಾ.ಮಾಪಂಗಡ ಪ್ರತಾಪ್ ಬೆಳ್ಳಿಯಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯೆಯೆಂಬ ಸಂಪತ್ತನ್ನು ಯಾರಿದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ನಿಶ್ಚಿತ ಗುರಿ ಇಟ್ಟುಕೊಂಡು ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು. ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣಗಣಪತಿ, ಸಹ ಕಾರ್ಯದರ್ಶಿಗಳಾದ ಪೊಡಮಾಡ ಮೋಹನ್ ಉಪಾಧ್ಯಕ್ಷರಾದ ಕಿರುಂದಂಡ ದೇವಯ್ಯ, ಖಜಾಂಚಿಗಳಾದ ಅಡ್ಡೇಂಗಡ ದೇವಯ್ಯ, ನಿರ್ದೇಶಕರಾದ ಅಡ್ಡೇಂಗಡ ಸಜನ್, ಮಾಚಂಗಡ ಬೀಮಯ್ಯ, ಪ್ರಾಂಶುಪಾಲ ಎನ್.ಕೆ.ಪ್ರಭು, ಮುಖ್ಯ ಶಿಕ್ಷಕ ಚಂದ್ರಶೇಖರ್ ಹಾಜರಿದ್ದರು.