ಜಿಲ್ಲೆ

ವಿವೇಕಾನಂದ ಆದರ್ಶಗಳು ಪ್ರೇರಣೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ, ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಯುವ ದಿನವನ್ನು ಆಚರಿಸಲಾಯಿತು.
ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಪ್ರಾಚಾರ್ಯ ಡಾ.ಎಲ್.ಈಶ್ವರಪ್ಪ, ಇಡೀ ಜಗತ್ತು ಭಾರತದ ಕಡೆ ಬೆರಗಾಗಿ ನೋಡುವಂತೆ ಮಾಡಿದವರು ವಿವೇಕಾನಂದರು. ಅಪ್ರತಿಮ ಚಿಂತಕ ವಿವೇಕಾನಂದರ ಆದರ್ಶಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದರು.
ಗ್ರಂಥಾಲಯ ವಿಭಾಗದ ಮುಖ್ಯಸ್ಥರಾದ ಎನ್.ಚಲುವರಾಜು, ವಿದ್ಯಾರ್ಥಿನಿ ಎಚ್.ಎಸ್.ಸುನೀತಾ, ಉಪನ್ಯಾಸಕ ಮಹೇಶ್ ಮಾತನಾಡಿದರು.
ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಎಂ.ಎಸ್.ಪರಮೇಶ್ವರ, ಎನ್‌ಎಸ್‌ಎಸ್ ಅಧಿಕಾರಿ ಜಿ.ಎಸ್.ನಾಗರಾಜ, ಕೆ.ಎಚ್.ಶಿವಕುಮಾರ್, ಮಿಸಬಾಖಾನುಂ, ಮಧು ಮತ್ತಿತರರು ಇದ್ದರು. ಎಂ.ಚಂದನಾ ಪ್ರಾರ್ಥಿಸಿದರು. ಲತಾ ಸ್ವಾಗತಿಸಿದರು. ಇ.ಬೇಬಿ ವಂದಿಸಿದರು. ಎಚ್.ಉಷಾ ನಿರೂಪಿಸಿದರು.