ನಗರದ ಶ್ರೀಮದ್ದೇವಾಲ ಮಹರ್ಷಿ ಮಹಾದ್ವಾರ ಸಮೀಪ ಶ್ರೀ ರಾಮನವಮಿಯನ್ನು ಗುರುವಾರ ಶ್ರೀ ಮದ್ದೇವಾಲ ಮಹರ್ಷಿ ಮಹಾದ್ವಾರ ಸಮಿತಿ ಆಚರಣೆ ಮಾಡಿ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ, ಕೋಸಂಬರಿ, ಹೆಸರುಬೇಳೆ ವಿತರಿಸಲಾಯಿತು. ಗಿರೀಶ್ ಬಾಬು, ರಮೇಶ್, ವಿಜಯ್ ಕುಮಾರ್ ಇತರರು ಇದ್ದರು. 
ಜಿಲ್ಲೆ

ವಿವಿಧೆಡೆ ಶ್ರೀರಾಮನವಮಿ ಆಚರಣೆ

ಕೊಳ್ಳೇಗಾಲ: ನಗರದ ವಿವಿಧೆಡೆ ಶ್ರೀರಾಮ ನವಮಿ ಪ್ರಯುಕ್ತ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.

ಶ್ರೀಮದ್ದೇವಲ ಮಹರ್ಷಿ ಮಹಾದ್ವಾರದ ಸಮೀಪ ಶ್ರೀರಾಮನ ಭಾವಚಿತ್ರಕ್ಕೆ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದ ಬಳಿಕ ಭಕ್ತರಿಗೆ ಮಜ್ಜಿಗೆ, ಹೆಸರುಬೇಳೆ, ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.

ನಾರಾಯಣಸ್ವಾಮಿ ರಥದ ಬೀದಿಯಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು. ಬಸ್ ನಿಲ್ದಾಣ ಪಕ್ಕದ ಗಣೇಶನ ದೇವಾಲಯ ಸಮೀಪ ಬಜರಂಗದಳ ವತಿಯಿಂದ ರಾಮನವಮಿ ಆಚರಣೆ ಮಾಡಲಾಯಿತು.

ರಾಮಮಂದಿರದಲ್ಲಿ, ಚಿಕ್ಕ ನಾಯಕರ ಬೀದಿ, ದೊಡ್ಡ ನಾಯಕರ ಬೀದಿ, ಉಪ್ಪಾರ ಮೋಳೆ, ದೇವಾಂಗ ಪೇಟೆ ಬಡಾವಣೆಯ ಪಂಚರಂಗಿ ವೃತ್ತದ ಬಳಿಯಿರುವ ಆಂಜನೇಯ ದೇವಸ್ಥಾನ, ಗರಡಿ ಬೀದಿಯ ವ್ನಿೇಶ್ವರ ಸೇವಾ ಸಮಿತಿ, ಮುನೇಶ್ವರ ಗುಡಿ ಬೀದಿ ಸೇರಿದಂತೆ ದೇವಾಂಗ ಪೇಟೆಯ 16 ಬೀದಿಗಳಲ್ಲೂ ಸಡಗರ ಸಂಭ್ರಮದಿಂದ ಶ್ರೀರಾಮ ನವಮಿಯನ್ನು ಆಚರಿಸಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.

ಶ್ರೀಮದ್ದೇವಾಲ ಮಹಾದ್ವಾರ ಸಮಿತಿಯ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿದರು. ಶ್ರೀ ಮದ್ದೇವಲ ಮಹರ್ಷಿ ಮಹಾದ್ವಾರ ಸೇವಾ ಸಮಿತಿಯ ಗೌರವಾಧ್ಯಕ್ಷ ಎನ್.ಗಿರೀಶ್ ಬಾಬು, ಅಧ್ಯಕ್ಷ ವಿಜಯ್ ಕುಮಾರ್, ರವಿಬಾಬು, ಕೃಷ್ಣಮೂರ್ತಿ (ಕಿಟ್ಟಿ), ರಮೇಶ್, ಶಿವಕುಮಾರ್, ಗೋವಿಂದರಾಜು, ಪ್ರಕಾಶ್ ಮತ್ತಿತರಿದ್ದರು.