ಜಿಲ್ಲೆ

ವಿವಿಧೆಡೆ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ

ಚಿತ್ರದುರ್ಗ: ನಗರದ ಟಿಎಚ್‌ಒ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾರತದ ಸಂವಿಧಾನ ಪೀಠಿಕೆಯ ವಾಚನ ನಡೆಯಿತು.

ಟಿಎಚ್‌ಒ ಡಾ.ಬಿ.ವಿ.ಗಿರೀಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ವಿಷಯ ನಿರ್ವಾಹಕ ಮಲ್ಲಿಕಾರ್ಜುನ್, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಗಂಗಾಧರ ರೆಡ್ಡಿ, ಕಚೇರಿ ವ್ಯವಸ್ಥಾಪಕ ಮಹಮದ್ ಅಲಿ, ಅಕೌಂಟೆಂಟ್ ಹಬೀಬ್, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಕಾತ್ಯಾಯನಮ್ಮ, ಗಣಕಯಂತ್ರ ನಿರ್ವಾಹಕರಾದ ನಾಗವೇಣಿ, ಪ್ರತಿಭಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಚಾಲಕ ರಮೇಶ್, ಕ್ಷಯರೋಗ ವಿಭಾಗದ ಸಿಬ್ಬಂದಿಗಳಾದ ಮಹೇಂದ್ರ, ಮಾರುತಿ, ಲೋಕೇಶ್, ಜಬ್ಬಾರ್ ಇತರರಿದ್ದರು.

ಡಯಟ್: ಡಯಟ್‌ನಲ್ಲಿ ವಿಶ್ವ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು. ಡಯಟ್ ಉಪಪ್ರಾಂಶುಪಾಲ ಸಿ.ಎಸ್.ವೆಂಕಟೇಶಪ್ಪ, ಉಪನ್ಯಾಸಕರಾದ ಎಸ್.ಬಸವರಾಜು, ಎಸ್.ಸಿ.ಪ್ರಸಾದ್, ಎಸ್.ಜ್ಞಾನೇಶ್ವರ, ಆರ್.ನಾಗರಾಜು, ಕೆ.ಜಿ.ಪ್ರಶಾಂತ್, ಎನ್.ರಾಘವೇಂದ್ರ, ವಿ.ಕನಕಮ್ಮ, ಎನ್.ಮಂಜುನಾಥ್, ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್, ಆರ್.ಲಿಂಗರಾಜು ಇತರರಿದ್ದರು.