ಚಾಮರಾಜನಗರ: ಚಾಮರಾಜನಗರ ವಿಭಾಗ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ವಿವಿಧ ಕಾಮಗಾರಿ ನಿರ್ವಹಿಸಲಿರುವ ಹಿನ್ನೆಲೆಯಲ್ಲಿ ಏ.19ರಂದು ಚಾಮರಾಜನಗರ, ಹರದನಹಳ್ಳಿ ಮತ್ತು ಸಂತೇಮರಹಳ್ಳಿ ಉಪವಿಭಾಗಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಕೋಡಿಮೋಳೆ, ಮಾದಾಪುರ, ಕಾಗಲವಾಡಿ, ಹರದನಹಳ್ಳಿ, ಬೇಡರಪುರ, ಟಿ.ಕೆ ಮೋಳೆ, ಶಿವಪುರ, ಗೂಳಿಪುರ, ಬದನಗುಪ್ಪೆ, ಪಣ್ಯದಹುಂಡಿ, ಬೆಂಡರವಾಡಿ, ಕೆಲ್ಲಂಬಳ್ಳಿ ಎನ್‌ಜೆವೈ, ಇಂಡಸ್ಟ್ರಿಯಲ್ ಏರಿಯಾ, ಕೆಇಡಿಪಿ 10 ಮತ್ತು 11, ಮುತ್ತಿಗೆ, ಹೆಗ್ಗೋಠಾರ, ಉಮ್ಮತ್ತೂರು, ಬಾಗಳಿ, ಲಿಂಗಣಾಪುರ, ಜನ್ನೂರು, ಜನ್ನೂರು ಹೊಸೂರು, ಹಳ್ಳಿಕೆರೆಹುಂಡಿ, ಗಣಗನೂರು, ಗಣಗನೂರುಪುರ, ನವಿಲೂರು, ಆಲ್ದೂರು, ಬಿಎಂಕೆ ಹುಂಡಿ, ಗೊದ್ದಲಹುಂಡಿ, ಕೊತ್ತಲವಾಡಿ, ಅರಕಲವಾಡಿ, ಯರಗನಹಳ್ಳಿ, ಸುವರ್ಣನಗರ, ಫ್ಯಾಕ್ಟರಿ, ಬಿಸಿಲವಾಡಿ, ಪುಣಜನೂರು, ಡೊಳ್ಳಿಪುರ, ಚನ್ನಪನಪುರ, ಅಮಚವಾಡಿ, ಮಾದಲವಾಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ನಿಗಮದ ಜತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಕರೆ ಮಾಡುವಂತೆ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.