ಕೃಷ್ಣರಾಜ ಸಾಗರದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ಬಸವ ಜಯಂತಿ ಆಚರಿಸಲಾಯಿತು. ಅಭಿಲಾಷ್, ಶಿವಪ್ಪ, ಜಗನ್ನಾಥ್, ನಾಗೇಶ್, ಶಿವಕುಮಾರ, ಸಿಬ್ಬಂದಿ ಇದ್ದರು. 
ಜಿಲ್ಲೆ

ವಿವಿಧೆಡೆ ಬಸವ ಜಯಂತಿ ಆಚರಣೆ

ಕೆ.ಆರ್.ಸಾಗರ: ಕೃಷ್ಣರಾಜ ಸಾಗರದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ಭಾನುವಾರ ಬಸವ ಜಯಂತಿ ಆಚರಣೆ ಮಾಡಲಾಯಿತು.

ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಸಹಾಯಕ ಇಂಜಿನಿಯರ್ ಅಭಿಲಾಷ್ ಪುಷ್ಪಾರ್ಚನೆ ಮಾಡಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ-ಭೇದ ಇಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಬಗ್ಗೆ ಸಂದೇಶ ಸಾರಿದ್ದರು. ಅವರ ವಚನಗಳನ್ನು ಸರ್ವರೂ ಅರ್ಥಮಾಡಿಕೊಂಡು, ಅದರಲ್ಲಿನ ತತ್ವಗಳನ್ನು ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘ ಕೆ.ಆರ್.ಸಾಗರ ಯೋಜನಾ ಘಟಕದ ಅಧ್ಯಕ್ಷ ಶಿವಪ್ಪ, ಗೌರವ ಅಧ್ಯಕ್ಷ ಜಗನ್ನಾಥ್, ಖಜಾಂಚಿ ನಾಗೇಶ್, ಸದಸ್ಯರಾದ ಶಿವಕುಮಾರ, ಸಿಬ್ಬಂದಿ ಇದ್ದರು.

ಅದೇ ರೀತಿ ಕೆ.ಆರ್.ಸಾಗರ ಗ್ರಾಮ ಪಂಚಾಯಿತಿ ಕಚೇರಿ, ಪೊಲೀಸ್ ಠಾಣೆಯಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಸವ ಜಯಂತಿ ಆಚರಣೆ ಮಾಡಲಾಯಿತು.