ಗುಂಡ್ಲುಪೇಟೆ: ತಾಲೂಕಿನ ವಿವಿಧೆಡೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಂಗಳವಾರ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಹಾಗೂ ದೂರುಗಳ ಬಗ್ಗೆ ಪರಿಶೀಲಿಸಿದರು.
ಅಂಕಹಳ್ಳಿ ಗ್ರಾಮದಲ್ಲಿ ಸುಮಾರು 30 ಕುಟುಂಬಗಳು ಪಾದರಕ್ಷೆ ತಯಾರಿಸುವ ಗೃಹ ಕೈಗಾರಿಕೆಯನ್ನು ಅವಲಂಬಿಸಿದ್ದಾರೆ. ಈ ಹಿಂದೆ ಲಿಡ್ಕರ್ ಸಂಸ್ಥೆಯು ಪಾದರಕ್ಷೆ ತಯಾರಿಸಲು ಅಗತ್ಯವಾದ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡುತ್ತಿತ್ತು. ಆದರೆ ಇತ್ತೀಚೆಗೆ ಇದನ್ನು ಕೈಬಿಟ್ಟಿದೆ. ಮನೆಗಳನ್ನು ಕಟ್ಟಿಸಿಕೊಡಿ ಎಂದು ಮನವಿ ಮಾಡಿದರು.
ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಚಾರುಲತಾ ಸೋಮಲ್ ಲಿಡ್ಕರ್ ಸಂಸ್ಥೆಯ ಜಿಲ್ಲಾ ಸಂಯೋಜಕ ಜಯರಾಂ ಅವರಿಗೆ ಸೂಚಿಸಿದರು. ನಂತರ ಪಾರ್ವತಿಬೆಟ್ಟ, ಸರ್ಕಾರಿ ಅನುದಾನ ಬಳಕೆ ಮಾಡುತ್ತಿರುವ ಮದ್ದಾನೇಶ್ವರ ಸಂಸ್ಥೆ, ಪಟ್ಟಣದ, ಶಾದಿ ಮಹಲ್ ಹಾಗೂ ಖಬರಸ್ತಾನ್‌ಗಳಿಗೆ ಭೇಟಿ ನೀಡಿ ದೂರುಗಳ ಬಗ್ಗೆ ಪರಿಶೀಲನೆ ನಡೆಸಿದರು.
ತಹಸೀಲ್ದಾರ್ ರವಿಶಂಕರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡೇಗೌಡ, ಪುರಸಭೆ ಮುಖ್ಯಾಧಿಕಾರಿ ಹೇಮಂತರಾಜು ಇದ್ದರು.