ಜಿಲ್ಲೆ

ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಾಳೆ

ಕಲಬುರಗಿ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ ೧೦.೩೦ ರಿಂದ ಮಧ್ಯಾಹ್ನ ೨ರವರೆಗೆ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ವಿ೫ ಏರ್‌ಟೇಲ್‌ದಲ್ಲಿ ಫೀಲ್ಡ್ ಸೇಲ್ಸ್, ಬ್ರಾö್ಯಂಡ್ ಪ್ರಮೋಟರ್, ಮಾರ್ಕೆಟಿಂಗ್ ಸೇಲ್ಸ್, ರಿಟೇಲ್ ಸೇಲ್ಸ್ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ, ಐಟಿಐ, ಯಾವುದೇ ಪದವಿ ಪಾಸಾಗಿರಬೇಕು. ಕ್ರೆಡಿಟ್ ಏಕ್ಸಾ ಗ್ರಾಮೀಣದಲ್ಲಿ ಟ್ರೆÊನಿ ಕೇಂದ್ರ ಮ್ಯಾನೇಜರ್ ಹುದ್ದೆಗೆ ಪಿಯುಸಿ, ಡಿಪ್ಲೊಮಾ, ಐಟಿಐ ಯಾವುದೇ ಪದವಿ ಪಾಸಾಗಿರಬೇಕು. ದಿ ಭಾರತ ಎಚ್.ಆರ್. ಸಲೂಷನ್ಸ್ದಲ್ಲಿ ಎಚ್‌ಆರ್ ರಿಕ್ಯೂರ‍್ಸ್ ವರ್ಕ್ ಫ್ರಾಮ್ ಹೋಮ್/ಆಫೀಸ್ ಹುದ್ದೆಗೆ ಯಾವುದೇ ಪದವಿ, ಎಂಬಿಎ ಪಾಸಾಗಿರಬೇಕು. ಆಪರೇಟರ್, ಕ್ವಾಲಿಟಿ ಕಂಟ್ರೋಲರ್ ಇಟಿಸಿ (ಟಾಟಾ ಇಲೆಕ್ಟಾನಿಕ್ಸ್) ಹುದ್ದೆಗೆ ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ, ಐಟಿಐ, ಯಾವುದೇ ಪದವಿ ಪಾಸಾಗಿರಬೇಕು. ಕೃಷಿ ಬಂಧುದಲ್ಲಿ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಒನ್ ಡಿಜಿಟಲ್ ಪ್ಲಾಟ್‌ಫಾರ್ಮ್ ಹುದ್ದೆ ಹಾಗೂ ಕಸ್ಟಮರ್ ಸಪೋರ್ಟ್ ಹುದ್ದೆಗಳಿಗೆ ಯಾವುದೇ ಪದವಿ ಪಾಸಾಗಿರಬೇಕು. ಆಸಕ್ತರು ಎಲ್ಲ ಅಂಕಪಟ್ಟಿಗಳ ಜೆರಾಕ್ಸ್, ರೆಸ್ಯೂಮ್ (ಬಯೋಡಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ದೊಂದಿಗೆ ಮಿನಿ ಉದ್ಯೋಗಮೇಳದಲ್ಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ದೂ.೦೮೪೭೨-೨೭೪೮೪೬, ಮೊ. ೯೬೨೦೦೯೫೨೭೦ ಗೆ ಸಂಪರ್ಕಿಸಲು ಕೋರಲಾಗಿದೆ.