ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಇತ್ತೀಚೆಗೆ ಕೊಣನೂರಿನಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ಚಕ್ರ ಎಸೆತ ಪ್ರಥಮ, ಭರ್ಜಿ ಎಸೆತ ತೃತೀಯ, 400 ಮೀ. ಓಟ ತೃತೀಯ, ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಕಬಡ್ಡಿ ದ್ವಿತೀಯ ಹಾಗೂ ವಾಲಿಬಾಲ್ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಬಾಲಕಿಯರ ವಿಭಾಗ: ಕಬಡ್ಡಿ(ಪ್ರ), 200 ಮೀ. ಓಟ (ದ್ವಿ), 800 ಮೀ. ಓಟ (ದ್ವಿ), 400ಗಿ100 ಮೀ. ಓಟ (ದ್ವಿ), ರಿಲೇ (ದ್ವಿ ) ಬಹುಮಾನ ಪಡೆದುಕೊಂಡಿದ್ದಾರೆ. ವಿಜೇತರನ್ನು ಸಿಡಿಸಿ ಉಪಾಧ್ಯಕ್ಷ ಮಂಜುನಾಥ್, ಕ್ರೀಡಾ ಕಾರ್ಯದರ್ಶಿ ಷಣ್ಮುಗ, ಪ್ರಾಂಶುಪಾಲೆ ಫರ್ಜಾನ್ ಅಂಜುಮ್, ಮಹಿಳಾ ಕ್ರೀಡಾ ಕಾರ್ಯದರ್ಶಿ ಶಾಂತಮ್ಮ, ಬಾಬುವರ್ಧನ್, ಶಶಿಧರ್, ಉಪನ್ಯಾಸಕರಾದ ಅಮರೇಶ, ಷಣ್ಮುಗ, ಗುರುಪ್ರಸಾದ್ ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.
ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವರೊಂದಿಗೆ ಫರ್ಜಾನ್ ಅಂಜುಮ್, ಶಾಂತಮ್ಮ, ಬಾಬುವರ್ಧನ್, ಶಶಿಧರ್ ಇತರರಿದ್ದರು.