ಚಿತ್ರದುರ್ಗ:ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ,ವಿವಿಧ ಸೌಲಭ್ಯಗಳನ್ನು ವಿತರಿಸಲು ಅಂಗವಿಕಲರಿಂದ ಅಗತ್ಯ ದಾಖಲೆಗಳೊಂದಿಗೆ ಡಿ.15ರೊಳಗೆ ಅರ್ಜಿ ಆಹ್ವಾನಿಸಿದೆ. ಶುಲ್ಕ ಮರುಪಾವತಿ, ವಿವಾಹ ಪ್ರೋತ್ಸಾಹಧನ, ಸ್ಪರ್ಧಾ ಚೇತನ ಮತ್ತಿತರ ಯೋಜನೆ ಗಳಡಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಅರ್ಜಿ ನಮೂನೆಗಳನ್ನು -್ಝಠಿ;ಡಿಡಿಡಿ.ಡಿಠ್ಚ.ಚ್ಟ.್ಞಜ್ಚಿ.ಜ್ಞಿನಿಂದ ನೇರ ಡೌನ್‌ಲೋಡ್ ಮಾಡಿಕೊಳ್ಳಬಹುದು. ತಾಪಂನ ವಿವಿಧೋದ್ದೇಶ ಪುನರ್ವಸತಿ ಕಾರ‌್ಯಕರ್ತರು, ಗ್ರಾಪಂ ಗ್ರಾಮೀಣ ಪುನರ್ವಸತಿ ಕಾರ‌್ಯಕರ್ತರು ಅಥವಾ ನಗರ ಪು ನರ್ವಸತಿ ಕಾರ‌್ಯಕರ್ತರಿಂದ ಅರ್ಜಿ ನಮೂನೆ ಪಡೆಯ ಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ,ಚಿತ್ರದುರ್ಗ(08194-235284)ವನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.